ಆರ್ಥಿಕ

ಹೊಸಾಡು:ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದಲ್ಲಿ ಕಳ್ಳತನ ಯತ್ನ ; ಪೊಲೀಸರ ಕಾರ್ಯಾಚರಣೆಯಿಂದ ಕಳ್ಳ ಸೆರೆ 

Views: 155

ಕುಂದಾಪುರ: ಮುಳ್ಳಿಕಟ್ಟೆ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಹೊಸಾಡು ಶಾಖೆಗೆ ಶುಕ್ರವಾರ ಮಧ್ಯ ರಾತ್ರಿ ಕಳ್ಳನೊಬ್ಬ ಕಿಟಕಿಯ ಗ್ರಿಲ್‌ ಮುರಿದು ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಈ ದೃಶ್ಯ ಅಲ್ಲಿನ ಸೈನ್‌ ಇನ್‌ ಸೆಕ್ಯುರಿಟೀಸ್‌ ಸಂಸ್ಥೆಯ ಲೈವ್‌ ಮಾನಿಟರಿಂಗ್‌ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಇದನ್ನು ಗಮನಿಸಿದ್ದ ಸೈನ್‌ ಇನ್‌ ತಂಡ ತತ್‌ ಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಂಗೊಳ್ಳಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಕಳ್ಳ ಸೊಸೈಟಿಯೊಳಗೆ ಸೆರೆ ಸಿಕ್ಕಿದ್ದಾನೆ.

ವಿಷಯ ತಿಳಿದ ಪೊಲೀಸರು ಸೊಸೈಟಿಗೆ ಸಂಬಂಧ ಪಟ್ಟವರನ್ನು ಕರೆಸಿ ಬಾಗಿಲು ತೆರೆದು ಒಳಗಿದ್ದ ಕಳ್ಳನನ್ನು ಸ್ಥಳದಲ್ಲಿಯೇ ಸೆರೆಹಿಡಿಯಲು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಕೇರಳದ ಕೊಲ್ಲಂ ಜಿಲ್ಲೆಯ ಕರುನಾಗವಳ್ಳಿ ತಾಲೂಕಿನ ಪ್ರಕಾಶ್‌ ಬಾಬು (46) ಅಲಿಯಾಸ್‌ ನಿಯಾಜ್‌ ಎಂದು ತಿಳಿಯಲಾಗಿದೆ.

ಕಳ್ಳತನ ತಪ್ಪಿಸಿದ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆ

ಕುಂದಾಪುರದ ಅಂಕದಕಟ್ಟೆಯಲ್ಲಿರುವ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯ ಲೈವ್‌ ಮಾನಿಟರಿಂಗ್‌ ಸಿಸಿ ಕೆಮರಾ ಹಾಕಿಸಲಾಗುತ್ತದೆ. ಈ ಸಂಸ್ಥೆಯು ದಿನದ 24 ಗಂಟೆಯೂ ಸಿಸಿ ಕೆಮರಾದಲ್ಲಿ ದಾಖಲಾಗುವ ದೃಶ್ಯಗಳ ಮೇಲೆ ನಿಗಾ ಇಡುತ್ತಿದ್ದು, ಕಳ್ಳತನ, ಅನುಮಾನಾಸ್ಪದ ವ್ಯಕ್ತಿಗಳ ಓಡಾಟ, ಸಂಶಯಾಸ್ಪದ ಚಟುವಟಿಕೆ ಕಂಡು ಬಂದರೆ ತತ್‌ಕ್ಷಣ ಪೊಲೀಸರ ಗಮನಕ್ಕೆ ತರುತ್ತದೆ. ಕುಂದಾಪುರದ ಹಲವೆಡೆ ಈವರೆಗೆ ಸಾಕಷ್ಟು ಸಂಭಾವ್ಯ ಕಳ್ಳತನ, ಅನಾಹುತಗಳನ್ನು ಪೊಲೀಸರ ಸಹಾಯದಿಂದ ತಪ್ಪಿಸುವಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿದೆ.

Related Articles

Back to top button
error: Content is protected !!