ಜನಮನ
ಶಿರೂರು: ಬಾವಿಗೆ ಬಿದ್ದ ಕರಿಚಿರತೆ ರಕ್ಷಣೆ ವೇಳೆ ಹಗ್ಗದ ಮೂಲಕ ಮೇಲಕ್ಕೆ ಬಂದು ಪರಾರಿ!

Views: 101
ಶಿರೂರು :ಕಳೆದ ಮೂರು ನಾಲ್ಕು ವರ್ಷಗಳಿಂದ ಈ ಪ್ರದೇಶದಲ್ಲಿ ಕರಿಚಿರತೆಯೊಂದು ರಾಜಾರೋಷವಾಗಿ ಸಂಚರಿಸುತ್ತಿದ್ದು, ಮುಂದಾರ್ತಿ ಸಮೀಪ ಶಿರೂರು ಮೂರುಕೈ ಎಂಬಲ್ಲಿ ಬಾವಿಗೆ ಬಿದ್ದ ಕರಿಚಿರತೆ ರಕ್ಷಣೆ ವೇಳೆ ಹಗ್ಗದ ಮೂಲಕ ಬಾವಿಯಿಂದ ಮೇಲಕ್ಕೆ ಬಂದು ಪರಾರಿಯಾದ ಘಟನೆ ನಡೆದಿದೆ.
ಹೆಮ್ಮಣಿಕೆ ಕೃಷ್ಣ ಕೃಷ್ಣ ನಾಯಕ್ ಎಂಬುವರ ಮನೆಯ ಆವರಣವಿಲ್ಲದ ಬಾವಿಗೆ ಕರಿಚಿರತೆ ಬಿದ್ದಿದ್ದು ಇದನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ್ದಾರೆ. ಚಿರತೆ ರಕ್ಷಣೆಗೆ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಬಾವಿಗೆ ಹಗ್ಗ ಇಳಿಸಿ ಬಲೆಯ ಸಹಾಯದಿಂದ ಚಿರತೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಅದು ಒಮ್ಮೆಲೆ ಹಗ್ಗದ ಮೂಲಕ ಬಾವಿಯಿಂದ ಮೇಲಕ್ಕೆ ಬಂದು ಪರಾರಿಯಾಗಿದೆ.
ಈ ಭಾಗದಲ್ಲಿ ನಾಯಿ ದನ ಕರುಗಳ ಮೇಲೆ ದಾಳಿ ನಡೆಸಿದ್ದ ಕರಿಚಿರತೆ ಆಹಾರ ಅರಸಿಕೊಂಡು ಬಾವಿಗೆ ಬಿದ್ದಿರಬಹುದು ಎಂದು ತಿಳಿದು ಬಂದಿದೆ






