ಆಧಾರ್-ರೇಷನ್ ಕಾರ್ಡ್ ಲಿಂಕ್‌ಗೆ ಮತ್ತೆ ಗಡುವು ವಿಸ್ತರಣೆ: ಲಿಂಕ್ ಮಾಡುವ ವಿಧಾನ ಹೇಗೆ?

Views: 108
ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಆಧಾರ್‌ಗೆ ಲಿಂಕ್ ಮಾಡುವ ಗಡುವನ್ನು ಮತ್ತೊಮ್ಮೆ ವಿಸ್ತರಿಸಿದೆ. ಈ ಮೊದಲು ಹೇಳಿದ್ದ ಪ್ರಕಾರ, ಇದೇ ಜೂನ್ 30 ರವರೆಗೆ ಲಿಂಕಿಂಗ್‌ಗೆ ಕಡೆಯ ದಿನಾಂಕವಾಗಿತ್ತು. ಆದರೀಗ, ಮತ್ತೆ ಗಡುವನ್ನು ವಿಸ್ತರಿಸಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅಥವಾ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕ ಇಲಾಖೆಯ ವೆಬ್‌ಸೈಟ್‌ಗಳಲ್ಲಿ ಲಿಂಕ್ ಮಾಡಿಸಬಹುದು. ಹಾಗಿದ್ರೆ, ಆಧಾರ್ ಲಿಂಕ್ ಮಾಡಲು ಆನ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ?
ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯಬಹುದಾದ ಯೋಜನೆಯಡಿ ನೀಡಲಾಗಿರುವ ರೇಷನ್ ಕಾರ್ಡ್‌ಗಳಿಗೆ ಮಾಡುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್-ರೇಷನ್ ಕಾರ್ಡ್ ಲಿಂಕ್ ಮಾಡಲು ಇದ್ದ ಡೆಡ್‌ಲೈನ್ ಅನ್ನು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿಸ್ತರಿಸಿದೆ. ಈ ರೀತಿಯ ಲಿಂಕ್‌ಗಾಗಿ ಜೂನ್ 30, 2024 ಕಡೆಯ ದಿನವಾಗಿತ್ತು. ಆದರೀಗ, ಈ ಗಡುವನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಅಂದರೆ ಸೆಪ್ಟಂಬರ್ 30, 2024 ವಿಸ್ತರಿಸಲಾಗಿದೆ.
ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುವ ಪಡಿತರ ಚೀಟಿಗಳಿಗೆ ಗಡುವು ವಿಸ್ತರಣೆ ಅನ್ವಯವಾಗಲಿದೆ.
ಕರ್ನಾಟಕದಲ್ಲಿ ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಆಧಾರ್ ಲಿಂಕಿಂಗ್‌ಗೆ ಅವಕಾಶವಿದೆ.
ಆಧಾರ್ ಲಿಂಕ್ ಮಾಡಿಸಲು ಬೇಕಿರುವ ದಾಖಲೆಗಳು
ಆಧಾರ್ ಲಿಂಕ್‌ಗಾಗಿ ನೀವು ನಿಮ್ಮ ಅಧಾರ್ ಕಾರ್ಡ್, ಜೊತೆಗೆ ಆಧಾರ್ ಕಾರ್ಡ್‌ನ ಜೆರಾಕ್ಸ್ ರೇಷನ್ ಕಾರ್ಡ್‌ನಲ್ಲಿ ಹೆಸರು ಉಳ್ಳವರ ಆಧಾರ್ ಕಾರ್ಡ್‌ಗಳು ಹಾಗೂ ಜೆರಾಕ್ಸ್ ಪ್ರತಿಯನ್ನೂ ತೆಗೆದುಕೊಂಡು ಹೋಗಬೇಕಾಗುತ್ತದೆ. ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್ ಯಾರ ಹೆಸರಿನಲ್ಲಿದೆಯೋ ಅವರ ಎರಡು ಪಾಸ್ ಪೋರ್ಟ್ ಸೈಜ್ ಪೋಟೋಗಳು ಬೇಕಾಗುತ್ತದೆ.
ಆನ್‌ಲೈನ್‌ನಲ್ಲಿ ಲಿಂಕ್ ಮಾಡುವ ವಿಧಾನ ಹೇಗೆ?
ಕರ್ನಾಟಕ ಆಹಾರ ಇಲಾಖೆ ವೆಬ್‌ಸೈಟ್‌ನಲ್ಲಿಯೂ ಆಧಾರ್ ಲಿಂಕ್ ಮಾಡಲು ಅವಕಾಶವಿದೆ.
ಹಂತ 1: ಮೊದಲು ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಆಹಾರ ಇಲಾಖೆಯ ವೆಬ್‌ಸೈಟ್ ಓಪನ್ ಮಾಡಿ. ಇ – ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಹಂತ 2: ಬಳಿಕ ಅಲ್ಲಿ ಐಯುಡಿ ಲಿಂಕ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿದರೆ, ಹೊಸ ಪೇಜ್ ಓಪನ್ ಆಗುತ್ತದೆ.
ಹಂತ 3: ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು UID linking for RC members ಅನ್ನು ಕ್ಲಿಕ್ ಮಾಡಿ ‘GO’ ಬಟನ್ ಕ್ಲಿಕ್ ಮಾಡಿದರೆ, ಮತ್ತೊಂದು ಹೊಸ ವೆಬ್ ಪೇಜ್ ಓಪನ್ ಆಗುತ್ತದೆ.
ಹಂತ 4: ಅಲ್ಲಿ ನೀಡಲಾಗಿರುವ ನಿಗದಿತ ಜಾಗದಲ್ಲಿ ಆಧಾರ್ ನಂಬರ್ ನಮೂದಿಸಿ, ‘GO’ ಬಟನ್ ಕ್ಲಿಕ್ಕಿಸಿದರೆ ನಿಮ್ಮ ಮೊಬೈಲ್ ಸಂಖ್ಯೆಗೆ OTP (ಒನ್ ಟೈಂ ಪಾಸ್ ವರ್ಡ್) ಬರುತ್ತದೆ.
ಹಂತ 5: ಅದನ್ನು ನೀವು ಆಧಾರ್ ನಂಬರ್ ಎಂಟರ್ ಮಾಡಿದ ವೆಬ್ ಪೇಜ್‌ನಲ್ಲಿರುವ ಒಟಿಪಿ ನಂಬರ್ ಹಾಕಬೇಕಾದ ಸ್ಥಳದಲ್ಲಿ ನಿಮ್ಮ ಮೊಬೈಲಿಗೆ ಬಂದಿರುವ ಒಟಿಪಿ ಸಂಖ್ಯೆ ನಮೂದಿಸಿ. ಅಲ್ಲೇ ಇರುವ ‘GO’ ಬಟನ್ ಕ್ಲಿಕ್ಕಿಸಿ.
ಹಂತ 6: ಬಳಿಕ ಓಪನ್ ಆಗುವ ಮತ್ತೊಂದು ಪೇಜ್‌ನಲ್ಲಿ ನಿಮ್ಮ ರೇಷನ್ ಕಾರ್ಡ್‌ನ ಸಂಖ್ಯೆಯನ್ನು ನಮೂದಿಸಲು ಕೇಳಲಾಗುತ್ತದೆ.
ಹಂತ 7: ಅಲ್ಲಿ, ‘RC’ ನಂಬರ್ ಎಂಟರ್ ಎಂದು ಇರುವ ಕಡೆ ರೇಷನ್ ಕಾರ್ಡ್ ನಂಬರ್ ನಮೂದಿಸಿ. ಅಲ್ಲಿಯೇ ಮುಂದೆ ಇರುವ ‘GO’ ಬಟನ್ ಕ್ಲಿಕ್ಕಿಸಿ. ಆಗ ರೇಷನ್ ಕಾರ್ಡ್‌ನಲ್ಲಿ ನಮೂದಿಸಲಾಗಿರುವ ಕುಟುಂಬದ ಯಜಮಾನರ ಮೊಬೈಲಿಗೆ ನೋಟಿಫಿಕೇಷನ್ ಬರುತ್ತದೆ.
ಹಂತ 8: ಅದರಲ್ಲಿ ರೇಷನ್ ಕಾರ್ಡ್‌ಗೆ ಆಧಾರ ಲಿಂಕ್ ಮಾಡುವ ಪ್ರಕ್ರಿಯೆಯನ್ನು ನೀವು ಪೂರ್ಣಗೊಳಿಸಿರುವುದಾಗಿ ತಿಳಿಸಲಾಗಿರುತ್ತದೆ. ಇಷ್ಟು ಮಾಡಿದ್ರೆ, ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್‌ಗೆ ಲಿಂಕ್ ಆಗುತ್ತದೆ.






