ಕುಂದಾಪುರ :ಮರವಂತೆಯ ವ್ಯಕ್ತಿಗೆ ಕೆನರಾ ಬ್ಯಾಂಕ್ ಹೆಸರಲ್ಲಿ ಸಂದೇಶ ಕಳುಹಿಸಿ 3.27 ಲಕ್ಷ ರೂ. ವಂಚನೆ

Views: 161
ಕುಂದಾಪುರ:ಮರವಂತೆಯ ವ್ಯಕ್ತಿಯೊಬ್ಬರಿಗೆ ಕೆನರಾ ಬ್ಯಾಂಕ್ ಹೆಸರಲ್ಲಿ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ, 3.27 ಲಕ್ಷ ರೂ. ಖಾತೆಯಿಂದ ಹಣ ಕಳೆದುಕೊಂಡ ಘಟನೆ ನಡೆದಿದೆ.
ಮರವಂತೆಯ ರಾಜೇಶ್ (43) ಅವರ ವಾಟ್ಸ್‌ಆ್ಯಪ್‌ಗೆ 08392086280 ನಂ.ನಿಂದ ಸಂದೇಶ ಬಂದಿದ್ದು, ಅದರಲ್ಲಿ ಕೆನರಾ ಬ್ಯಾಂಕ್ ಎಂಬುದಾಗಿ ಬರೆಯಲಾಗಿತ್ತು. ಕೂಡಲೇ ರಾಜೇಶ್ ಕೆನರಾ ಬ್ಯಾಂಕ್‌ಗೆ ಹೋಗಿ ಮ್ಯಾನೇಜರ್ ಅವರಲ್ಲಿ ವಿಚಾರಿಸಿದಾಗ ತಮ್ಮ ಬ್ಯಾಂಕ್‌ನಿಂದ ಇಂತಹ ಯಾವುದೇ ಸಂದೇಶ ಕಳುಹಿಸಿಲ್ಲ ಎಂದು ಹೇಳಿದ್ದಾರೆ, ಕೂಡಲೇ ಆ ಸಂದೇಶ ಡಿಲೀಟ್ ಮಾಡುವಂತೆ ಹೇಳಿದ್ದಾರೆ.
ಅದೇ ದಿನ ಸಂಜೆ ಹೊತ್ತಿಗೆ ಇವರ ಎಸ್‌ಬಿ ಖಾತೆಯಿಂದ 48,900 ರೂ., ಎಸ್‌ಬಿ ಸೆಲೆಕ್ಟ್ ಖಾತೆಯಿಂದ 60,900 ರೂ., ಓಡಿ ಖಾತೆಯಿಂದ 1.69 ಸಾವಿರ ರೂ., ಕ್ರೆಡಿಟ್ ಕಾರ್ಡ್‌ನಿಂದ 49,162 ರೂ. ಸೇರಿ ಒಟ್ಟು 3.27 ಲಕ್ಷ ರೂ. ಯಾರೋ ವಿತ್ ಡ್ರಾ ಮಾಡಿಕೊಂಡು ರಾಜೇಶ್ ಅವರಿಗೆ ವಂಚಿಸಲಾಗಿದೆ.
ಯಾರೋ ಇವರ ಹೆಸರಲ್ಲಿ ಎಟಿಎಂ ಕೇಂದ್ರಕ್ಕೆ ತೆರಳಿ ಇವರ ಖಾತೆಯಿಂದ ಹಣ ತೆಗೆಯಲು ಹೋದಾಗ ಒಟಿಪಿ ನಂಬರ್ ಇವರಿಗೆ ಬಂದಿದೆ, ಅವರಿಗೂ ಬಂದಿದ್ದು, ಅದನ್ನು ಹಾಕಿ, ಆ ಸೈಬರ್ ವಂಚಕರು ಹಣವನ್ನು ತೆಗೆದಿದ್ದಾರ ಎಂದು ತಿಳಿದು ಬಂದಿದೆ.
ಹಣ ಕಳೆದುಕೊಂಡ ರಾಜೇಶ್ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






