ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಕೇಸ್ಗೆ ಹೊಸ ಟ್ವಿಸ್ಟ್.. ಸಾಲವೇ ಸಾವಿಗೆ ಕಾರಣವಾಯ್ತಾ?ಸಾವಿಗೂ ಮುನ್ನ ಕರೆ ಮಾಡಿದ್ದು ಯಾರಿಗೆ?

Views: 98
ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಇಂದು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿನ ಸುತ್ತ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ.
ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ತಮ್ಮ ವ್ಯವಹಾರದಲ್ಲಿ ಹಲವು ಬ್ಯಾಂಕ್ಗಳಿಂದ ಸಾಲ ಪಡೆದಿದ್ದರು. ಇತ್ತೀಚೆಗೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ರು. ಕೆಲವೊಂದು ಪ್ರಾಪರ್ಟಿಗಳಿಗೆ ಬ್ಯಾಂಕ್ನಿಂದ ನೋಟಿಸ್ ಕೂಡ ನೀಡಲಾಗಿತ್ತು. ಕೆಲ ದಿನಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗ್ತಿದೆ. ಸದ್ಯ ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಕುಟುಂಬಸ್ಥರಿಂದ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದಾರೆ
ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಫೈನಾನ್ಸ್ ಪ್ರಾಬ್ಲಂ ಹಾಗೂ ಸಾಲದ ಟೆನ್ಷನ್ನಿಂದ ಆತ್ಮಹತ್ಯೆ ಮಾಡಿಕೊಂಡ್ರಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಜಗದೀಶ್ ಅವರನ್ನು ಹತ್ತಿರದಿಂದ ನೋಡಿರುವ ಎಲ್ಲರೂ ಆತ ತುಂಬಾ ಒಳ್ಳೆಯ ಮನುಷ್ಯ. ತುಂಬಾ ಸಂಸ್ಕಾರಯುತ ವ್ಯಕ್ತಿ ಎನ್ನುತ್ತಿದ್ದಾರೆ. ಆದರೆ ಇತ್ತೀಚೆಗೆ ಅವ್ರು ತುಂಬಾ ವೀಕ್ ಆಗಿದ್ರು. ಬಹುಶಃ ಫೈನಾನ್ಸಿಯಲ್ ಪ್ರಾಬ್ಲಂನಿಂದ ಅವರು ಅವ್ರು ನೊಂದಿರಬಹುದು ಎಂದು ಹೇಳಲಾಗಿದೆ
ಸಾವಿಗೂ ಮುನ್ನ ಕರೆ ಮಾಡಿದ್ದು ಯಾರಿಗೆ?
ಇದೀಗ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ವೇಳೆ ಪೊಲೀಸರು ಸೌಂದರ್ಯ ಜಗದೀಶ್ ಅವರ ಮೊಬೈಲ್ ಸೀಜ್ ಮಾಡಿದ್ದಾರೆ. ಸೌಂದರ್ಯ ಜಗದೀಶ್ರಿಗೆ ಸೇರಿದ ಎರಡು ಫೋನ್ಗಳನ್ನು ಪೊಲೀಸರು ಈಗಾಗಲೇ ಸೀಜ್ ಮಾಡಿಕೊಂಡಿದ್ದಾರೆ. ನಂತರ ಪೊಲೀಸರು ಎಫ್.ಎಸ್.ಎಲ್ಗೆ ಮೊಬೈಲ್ ರವಾನಿಸಿ ಅದರಲ್ಲಿರೋ ಡೇಟಾ ರಿಟ್ರೀವಲ್ ಮಾಡಿಸಲಿದ್ದಾರಂತೆ. ಆತ್ಮಹತ್ಯೆಗೆ ಶರಣಾಗಿರೋ ಹಿಂದಿನ ದಿನದ ಎಲ್ಲಾ ಫೋನ್ ಕಾಲ್ಗಳ ಬಗ್ಗೆ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.






