ಧಾರ್ಮಿಕ

ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ. ಶ್ರೀ ಕ್ಷೇತ್ರ ಕೂಡ್ಲು,ಬಾಡಬೆಟ್ಟು, ಕುಂದಾಪುರ 

Views: 317

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕನ್ಯಾನ ಗ್ರಾಮದ ಕೂಡ್ಲು,ಬಾಡಬೆಟ್ಟು ದಿವ್ಯ ಭವ್ಯವಾಗಿ ಸತ್ಯ ಧರ್ಮಗಳ ತವರುರಾಗಿ, ಕಣ್ಮನ ಸೆಳೆಯುವ ವಿಶಾಲವಾದ ಕಾರಣಿಕ, ಶೀಘ್ರ ಫಲದಾಯಕ ಆರಾಧನ ಸ್ಥಳವೇ ಶ್ರೀ ಶನೇಶ್ವರ ಸ್ವಾಮಿಯ ಕ್ಷೇತ್ರ ಈ ಕ್ಷೇತ್ರದಲ್ಲಿ ಶ್ರೀ ಚೌಡೇಶ್ವರಿ ಶ್ರೀ ಛಾಯಾದೇವಿ ಶ್ರೀ ಆಂಜನೇಯ ಶ್ರೀ ಗಣಪತಿ ಶ್ರೀ ನಾಗದೇವರು ಹಾಗೂ ಸಹ ಪರಿವಾರ ದೇವರುಗಳ ಪವಿತ್ರ ಸ್ಥಳವಾಗಿದೆ.

ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟಿನ ಶ್ರೀ ಶನೀಶ್ವರ ದೇವರ ಸನ್ನಿಧಾನದ ಪರಿಚಯ

ಕನ್ನಡನಾಡಿನ ಹಲವಾರು ಶಕ್ತಿ ದೇವಾನುದೇವತೆಯರ ಕ್ಷೇತ್ರಗಳ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕುಂದಗನ್ನಡದ ತವರೂರಾದ ಈ ನಮ್ಮ ಕುಂದಾಪುರವೂ ಸಹ ಸೇರಿರುತ್ತದೆ. ಕರಾವಳಿ, ಮಲೆನಾಡು ಮತ್ತು ಬಯಲು ಸೀಮೆಗಳೆಂಬ ಮೂರು ಭೂಪ್ರದೇಶಗಳ ಸಂಗಮವಾಗಿದೆ. ಮೈಲುಗಟ್ಟಲೆ ಕಡಲ ಕಿನಾರೆ. ನಿಸ್ವಾರ್ಥ ಮನೋಭಾವದ ಜನಸಮೂಹ, ದೈವೀ-ದೇವಿಗಳ ಆಲಯಗಳು, ಎಲ್ಲವೂ ಸಹ ಈ ಕರುನಾಡ ವನದೇವಿಯ ಸಿರಿಮುಡಿಯಲ್ಲಿ ಹಚ್ಚಹಸುರಿನ ತಾಣಗಳ ನಡುವೆ ಭವ್ಯವಾಗಿ ಕಂಗೊಳಿಸುತ್ತವೆ. ಇಂತಹುದೇ ವನಸಿರಿಯ ಮಡಿಲಲ್ಲಿ, ಒಂದು ಪ್ರದೇಶದ ನೀರನ್ನೇ ಒಣಗಿಸಿ ನೆಲವನ್ನು ಬರಡು ಮಾಡಿ, ಬಿರುಕು ಮೂಡಿಸಿ, ಮಾನವನ ಗಂಟಲಿನ ನೀರಿನ ಪಸೆಯನ್ನ ಒಣಗಿಸಲೂ ಬಲ್ಲ ಭೂದೇವಿ ತನ್ನ ಆಕ್ರೋಶ, ಆವೇಶವನ್ನೆಲ್ಲಾ ಒಮ್ಮೆಲೇ ಪ್ರದರ್ಶಿಸಿದ್ದಾಳೆ ಬೇರಾವ ಸಂಶಯವೂ ಇಲ್ಲವೆನ್ನುವುದಕ್ಕೆ ಸಾಕ್ಷಿಯಾಗಿ, ಹಚ್ಚ-ಹಸಿರೆಲ್ಲಾ ಮುದುಡಿ ಬಾಡಿ ಹಾಗೆ ಸುಮ್ಮನೇ ಉದುರಿ ಹೋದಂತೆ ಕಂಡುಬಂದ ರುದ್ರ ರಮಣೀಯ ಸ್ಥಳವಾದ ಬರಡು-ಬಂಜರು ಭೂಮಿ; ಬಾಡಿಹೋದ ಬೆಟ್ಟು ಅದುವೇ, ‘ಬಾಡಬೆಟ್ಟು’

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರಿನಿಂದ ಪೂರ್ವ ದಿಕ್ಕಿಗೆ ಸಾಗುವ ರಸ್ತೆಯಲ್ಲಿ 4-5 K.m. ಸಾಗುತ್ತಾ ಹೋದರೆ ಕಾಣ ಸಿಗುವ,ಈ ಕಾಡು-ಮೇಡಿನಂತಿರುವ ಬಿಳಲುಗಳ ನಡುವೆ ಅಡಿಯನ್ನಿಟ್ಟ ಕೂಡಲೇ, ಕೂಗಳತೆಯ ದೂರದಲ್ಲಿ ಪುಟ್ಟದೊಂದು ಗುಡಿ ಚಿಗುರೊಡೆದು, ದಿವ್ಯ ಭವ್ಯವಾಗಿ ಸತ್ಯಧರ್ಮಗಳ ತವರೂರಾಗಿ ಕಣ್ಮನ ಸೆಳೆಯುವುದು ಆ ವಿಶಾಲವಾದ ಒಂದು ಆರಾಧನಾ ಸ್ಥಳವೇ, ಕೂಡ್ಲು ಬಾಡಬೆಟ್ಟು ಶ್ರೀ ಶನೀಶ್ವರ ಸ್ವಾಮಿಯ ಕ್ಷೇತ್ರ. ಇಲ್ಲಿ ಬರುವಾಗ, ಮೊದಲಾಗಿ ಕಾಣಸಿಗುವ ಸ್ಥಳವೇ ಸ್ವಾಮಿದೇವರ ಕೂಡ್ಲು .ಇಲ್ಲಿಯೇ, ಈ ಶನೀಶ್ವರ ಸ್ವಾಮಿ ದೇವರ ನೆಲೆ

ಕಾರಣಿಕ ಶಕ್ತಿ ಸ್ವರೂಪ ಶ್ರೀ ಸ್ವಾಮಿ ಶನಿ ದೇವರ ದರ್ಶನ

ಶ್ರೀ ಕ್ಷೇತ್ರದ ಧರ್ಮಾಧಿಕಾರಿಯಾಗಿರುವ ಶ್ರೀ ಜಯರಾಮರವರಲ್ಲಿ, ಶನಿಮಹಾರಾಜನು ಅದೆಷ್ಟೊಂದು ಶಕ್ತಿಶಾಲಿಯಾಗಿ ಏರಿ ಬರುವನೆಂದರೆ, ಬೇಡಿ ಬಂದ ಜನರ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತದೆ ಎಂಬುದು ಪರಂಪರಾಗತವಾಗಿ ನಂಬಿಕೊಂಡು ಬಂದ ಸತ್ಯಸಂಗತಿ. ಇಂತಹ ಹಿನ್ನಲೆಯನ್ನೊಳಗೊಂಡ ಶ್ರೀ ಕ್ಷೇತ್ರದಲ್ಲಿನ ಶನಿಮಹಾದೇವನಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಪೂಜಾರಿಯು ಆರತಿ ಎತ್ತುತ್ತಿದ್ದ ಹಾಗೆಯೇ, ತಾಯಿಯ ತೆಕ್ಕೆಯಲ್ಲಿರುವಂತೆ ಕಂಡುಬರುವ ಗುಡಿಯಲ್ಲಿರುವ ಶ್ರೀ ಸ್ವಾಮಿಯು ಆ ಕೂಡಲೇ, ಇವರ ಶರೀರವನ್ನು ಕ್ಷಣ ಆವರಿಸಿ ಐಕ್ಯಗೊಂಡವನಂತೆ ತತ್‍ಕ್ಷಣ ಅಬ್ಬರಿಸುತ್ತ ಏರಿ ಬರುತ್ತಾನೆ. ಆಗಲ್ಲಿ ಇಡೀ ದೇವಾಲಯದ ಆವರಣವೇ ಕ್ಷಣಕಾಲ ಬದಲಾಗಿ ಹೋದಂತೆ ಭಾಸವಾಗುವುದು. ಯಾರೇ ಆಗಲಿ ಈ ಬದಲಾವಣೆಯನ್ನು ಅಲ್ಲಿ ಈಗಲೂ ಸಹ ನಾನು ಕಣ್ತುಂಬಿಸಿಕೊಂಡಂತೆ ನೋಡಿ ಮನವರಿಕೆ ಮಾಡಿಕೊಳ್ಳಬಹುದು.

ಏರಿ ಬಂದ ಸ್ವಾಮಿಯು ಬೇಡಿ ಬಂದ ಭಕ್ತರ ಕೇಳಿಕೆಯನ್ನು ಸಮಸ್ಯೆಯನ್ನು ತೊಂದರೆಗಳನ್ನು ಅಥವಾ ದುಃಖಗಳನ್ನ ಏನೇನು ಹೇಳುತ್ತಾರೋ ಅದನ್ನೆಲ್ಲಾ ಕೇಳಿಸಿಕೊಂಡು ನಂತರ ಅವರ ಆಯಾಯ ಸಮಸ್ಯೆಗಳಿಗೆ, ಒತ್ತಡಗಳಿಗೆ, ಕಾರಣ, ಘಟನೆಗಳನ್ನೂ ತಿಳಿಸಿ ಪರಿಹಾರ ಮಾರ್ಗವನ್ನು ಸೂಚಿಸುತ್ತಾರೆ. ಬೇಡಿ ಬಂದ ಭಕ್ತರ ಕಷ್ಟವನ್ನು ನೀಗುತ್ತಿದ್ದ ಶ್ರೀ ಶನಿದೇವರಿರುವ ದಿವ್ಯಸನ್ನಿಧಿಯು ಕಾಲಸರಿದಂತೆ, ಇದೀಗ ನವೀನಶೈಲಿಯಲ್ಲಿ ಕಟ್ಟಿದ ಆಧುನಿಕ ಆಕರ್ಷಕ ಗುಡಿ ಮೈತಳೆದು ನಿಂತಾಗ ಎಲ್ಲರೂ ನಿರಾಯಾಸವಾಗಿ ಉಸಿರು ಬಿಡುವಂತಿದೆ. ಶ್ರೀ ದೇವರ ಪಾದವನ್ನು ಮುಟ್ಟಿ ಏನನ್ನೇ ತಮ್ಮ ಯಥಾನುಶಕ್ತಿ ರೂಪದಲ್ಲಿ ಹರಕೆ ಹೊತ್ತು ಪ್ರಾರ್ಥನೆಯನ್ನಿರಿಸಿದರೆ, ಮದುವೆ, ಸಂತಾನದ ಬಗ್ಗೆ, ವ್ಯಾಪಾರ-ವ್ಯವಹಾರ, ಎಲ್ಲಾ ವಹಿವಾಟಿನ ಬಗ್ಗೆ, ಭೂಮಿ ಬಗ್ಗೆ, ಇನ್ನು ಅನೇಕ ವೈಯ್ಯಕ್ತಿಕ ಹಾಗೂ ವೃತ್ತಿಪರ ಜೀವನದ ಕುರಿತು ಸಮಸ್ಯೆಗಳಿದ್ದು ಅದರ ಪರಿಹಾರಕ್ಕೆ ಬೇಡಿಕೆಯನ್ನಿಟ್ಟು ಇಲ್ಲಿಗೆ ಬಂದವರ ಆ ಸರ್ವ ಬೇಡಿಕೆಗಳೆಲ್ಲವೂ ಸಹ ಯಥೇಚ್ಛವಾಗಿ ನೆರವೇರುತ್ತದೆ ಎಂಬ ಪ್ರತೀತಿಯಲ್ಲಿ ಇದೀಗ ಶ್ರೀ ಕ್ಷೇತ್ರಕ್ಕೆ ಹಿಂದೆಗಿಂತಲೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧೆಡೆಯಿಂದ ಸದ್ಭಕ್ತರು ಆಗಮಿಸುತ್ತಿದ್ದು, ತಮ್ಮ ಸಕಲ ಸಂಕಷ್ಟ-ಸಮಸ್ಯೆಗಳ ವಿಚಾರದಲ್ಲಿ ದೇವರ ಮುಂದಿಟ್ಟು, ತಂತಮ್ಮ ಇಷ್ಟಾರ್ಥಗಳನ್ನೆಲ್ಲಾ ಸಿದ್ಧಿ ಮಾಡಿಕೊಂಡವರು ಅನೇಕರಿದ್ದಾರೆ.

ಸಪ್ತಮಾತೃಕೆಯರ ಪೈಕಿಯಲ್ಲಿ ಒಬ್ಬಳಾದ ದುರ್ಗಾದೇವಿ ಚೌಡೇಶ್ವರಿ ನೆಲೆ

ಕೂಡ್ಲು ಶ್ರೀ ಸ್ವಾಮಿ ದೇವರ ತಾಣದಲ್ಲಿ ಶನಿ ದೇವನ ಜೊತೆಗೆ, ದೇವಿಯ ಭಯಾನಕ ರೂಪ ಹಾಗೂ ಸಪ್ತಮಾತೃಕೆಯರ ಪೈಕಿಯಲ್ಲಿ ಒಬ್ಬಳಾದ  ದುರ್ಗಾದೇವಿಯ ಪರಿಚಾರಕಿಯರಾದ 64 ಅಥವಾ, 81 ತಾಂತ್ರಿಕ ದೇವತೆಗಳಾದ ಮುಖ್ಯ ಯೋಗಿನಿ ಪ್ರಬಲವಾದ ದೇವತೆ, ಶ್ರೀ ಚೌಡೇಶ್ವರಿ ದೇವರು, ಶ್ರೀ ಶನಿದೇವನ ತಾಯಿ ಶ್ರೀ ಛಾಯಾದೇವಿ, ಶ್ರೀ ನಾಗದೇವರು, ಶ್ರೀ ನಾಗಯಕ್ಷೀ, ಶ್ರೀ ಸ್ವರ್ಣಯಕ್ಷೀ, ಶ್ರೀರಕ್ತೇಶ್ವರಿ, ಶ್ರೀಆಂಜನೇಯ ಸ್ವಾಮಿ, ಮಲೆಯಾಳಿ ಬೊಬ್ಬರ್ಯ, ವೀರಭದ್ರ, ಅಣ್ಣಪ್ಪ, ಪಂಜುರ್ಲಿ, ಮಂತ್ರದೇವತೆ, ಕಲ್ಲುಕುಟಿಗ, ಖಾಡೀಯಮ್ಮ, ಯಕ್ಷೀ, ನೇತ್ರ ಹೈಗುಳಿ, ರಾಹು, ನೀಚ, ಭೂತರಾಯ ಹಾಗೂ ಕ್ಷೇತ್ರಪಾಲಕ ದೇವರು ಹಾಗೂ ಸಪರಿವಾರ ದೈವಗಳು ಮತ್ತು ಶ್ರೀ ಸನ್ನಿಧಿ ಬಸವ ಶ್ರೀಗಣೇಶ, ಅಶ್ವತ್ಥಮರ, ಶಮೀವೃಕ್ಷ, ಶ್ರೀ ತುಳಸಿ ಸಹಿತ ಈ ತಾಣವು ಸುಂದರವಾಗಿ ನೆಲೆಗೊಂಡು ಕಾರಣೀಕ ಕ್ಷೇತ್ರವಾಗಿ ಪ್ರಸಿದ್ಧಿಗೊಂಡಿದೆ. ಅಲ್ಲದೇ, ವಿಕ್ರಮಾದಿತ್ಯ ಸಮೇತ ಬೇತಾಳ ಅಲ್ಲಿಯೇ ಪಕ್ಕದಲ್ಲಿರುವ ಕೊಳವೆಯ ಹತ್ತಿರವಿರುವ ಮದಗದ ಸಮೀಪ ಇರುವ ಬಹುಗಾತ್ರದ ಹುತ್ತದೊಂದಿಗೆ ಬೆಳೆದು ನಿಂತು ಕಂಗೊಳಿಸುವ ಚಿಂಗೊಳಿ ಮರದಲ್ಲಿ ಇರುವುದಾಗಿ ಆರೂಢಪ್ರಶ್ನೆಯಲ್ಲಿ ಅರಿವಿಗೆ ಬರುತ್ತಿದ್ದ ಹಾಗೆಯೇ, ಸಮಸ್ತ ಊರ ಹಾಗೂ ಪರಊರ ಭಕ್ತಾದಿಗಳ  ತನು-ಮನ-ಧನ ಸಹಕಾರದಿಂದ ಇದೀಗ ಸುಂದರ ದೇಗುಲ ನಿರ್ಮಾಣಗೊಂಡಿದ್ದು, ಮೇಲ್ಭಾಗದ ಛಾವಣಿಯಲ್ಲಿ ಕಲಾತ್ಮಕ ಕುಸುರಿ ಕೆಲಸ ಮಾಡಲಾಗಿದ್ದು, ಗೋಪುರದ ಶಿಖರದಲ್ಲಿ ಕಲಶವನ್ನು ಪ್ರತಿಷ್ಠಾಪಿಸಲಾಗಿದೆ. ಅಂತಹ ಈ ಪುಣ್ಯ ಸ್ಥಳದಲ್ಲಿ ಪ್ರಧಾನ ದೇವರು ಶ್ರೀ ಶನಿದೇವನೇ ಆಗಿರುತ್ತಾನೆ.

ಶ್ರೀ ಕ್ಷೇತ್ರಕ್ಕೆ ಸಹಸ್ರಾರು ಭಕ್ತಾದಿಗಳು ಉತ್ತರ ಕನ್ನಡ, ಮಲೆನಾಡು ಉಡುಪಿ, ದಕ್ಷಿಣ ಕನ್ನಡ ಹಾಗೂ ರಾಜ್ಯ, ಹೊರದೇಶದಿಂದ ಭಕ್ತರು ಆಗಮಿಸುತ್ತಾರೆ ಇಲ್ಲಿನ ವಿಶೇಷವೆಂದರೆ ಪ್ರಪಂಚದ ಯಾವುದೇ ಒಂದು ಶನೀಶ್ವರ ದೇಗುಲಕ್ಕೆ ನಿರ್ಮಾಣವಾಗದಂತಹ ಬ್ರಹ್ಮರಥ ಹೊಂದಿದೆ.

ಶ್ರೀ ಕ್ಷೇತ್ರದಲ್ಲಿ ನಡೆದು ಬಂದ ಕಾರ್ಯಕ್ರಮಗಳು

ಕ್ಷೇತ್ರದ ಪ್ರಧಾನ ಪುರೋಹಿತರು ಮತ್ತು ತಂತ್ರಿಗಳಾದ ಶ್ರೀ ಗುರುರಾಜ ಸೋಮಯಾಜಿ ಬ್ರಹ್ಮನಜೆಡ್ಡು ನೇರಳಕಟ್ಟೆ ಇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಕ್ಷೇತ್ರದ ಮಾರ್ಗದರ್ಶಕರಾದ ಆಡಳಿತ ಧರ್ಮದರ್ಶಿಗಳು ಆದ ಶ್ರೀ ಜಯರಾಮ ಸ್ವಾಮಿಯವರ ನೇತೃತ್ವದಲ್ಲಿ ನಡೆದು ಬಂದಿರುತ್ತದೆ

ವರ್ಷಂಪ್ರತಿ ಶ್ರೀದೇವಿಗೆ 108 ಬ್ರಹ್ಮ ಕಲಶ, ದೀಪ ನಮಸ್ಕಾರ. 24.04.2022 ರಂದು 1001 ಬ್ರಹ್ಮ ಕಲಸ, ಶ್ರೀದೇವರಿಗೆ ಎರಡು ಬಾರಿ ಶನೀಶ್ವರಯಾಗ, ವರ್ಷಂಪ್ರತಿ ಶ್ರೀದೇವಿಗೆ ಚಂಡಿಕಾ ಹೋಮ ಮತ್ತು ದುರ್ಗಾ ಹೋಮ, ದಿನಾಂಕ 23.01.2022ರಂದು ಅಶ್ವತ ಮರದ ಉಪನಯನ, ಭಾಗ್ಯ ತತ್ವ ಹೋಮ, ಲಕ್ಷ್ಮೀನಾರಾಯಣ ಹೋಮ, ಗಣಪತಿ ದೇವರಿಗೆ 108 ಕಾಯಿ ಗಣ ಹೋಮ, ನರಸಿಂಹ ಹೋಮ, ಪಾರ್ವತಿ ಸ್ವಯಂವರ ಹೋಮ, ದಿನಾಂಕ 29.05.2023 ರಂದು ಬ್ರಹ್ಮರಥೋತ್ಸವ, ಶನಿ ದೇವರಿಗೆ ವಿಶೇಷ ಪೂಜೆ ಹಾಗೂ ಶನಿ ಕಥಾಪ್ರವಚನ, ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಸತ್ಯನಾರಾಯಣ ಪೂಜೆ, ನಾಗದೇವರಿಗೆ ಆಶ್ಲೇಷಬಲಿ ಮತ್ತು ಸರ್ಪ ಸಂಸ್ಕಾರ, ದಿನಾಂಕ 18.11.2023ರಂದು ಶತರುದ್ರ ಜಪ ಪುರಸ್ರರ ರುದ್ರ ಯಾಗ, ಮತ್ತು ಸಾಮೂಹಿಕ ಭಜನಾ ಕಾರ್ಯಕ್ರಮ,

ದಿನಾಂಕ 26.02.2024ರಂದು ಸೋಮವಾರ ಮಾಘ ಮಾಸ ಉತ್ತರ ನಕ್ಷತ್ರದಂದು ಶ್ರೀ ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ ಮತ್ತು ಪ್ರತಿ ವರ್ಷ ಮಾಘ ಮಾಸ ಉತ್ತರ ನಕ್ಷತ್ರ ಶಿವರಾತ್ರಿ ತಿಂಗಳಲ್ಲಿ ನಡೆಯಲಿರುತ್ತದೆ.

 ವಿಶೇಷ ದರ್ಶನ ಸೇವೆ ಸಮಯ ಮಧ್ಯಾಹ್ನ 12:30ಕ್ಕೆ

ಬೆಳಿಗ್ಗೆ 5ರಿಂದ ಅಪರಾಹ್ನ 1.30 ವರೆಗೆ ಸಂಜೆ 5 ರಿಂದ 7:30ರ ವರೆಗೆ, ಶನಿವಾರ ಬೆಳಿಗ್ಗೆ 4ರಿಂದ ಸಂಜೆ 8:30ರ ವರೆಗೆ ದೇವರ ದರ್ಶನವಿರುತ್ತದೆ.

ಎಲ್ಲಾ ದಿವಸಗಳಲ್ಲಿ ಆಡಳಿತ ಧರ್ಮದರ್ಶಿ ಜಯರಾಮ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುತ್ತದೆ.

ಶನಿವಾರ ವಿಶೇಷವಾಗಿ ಮಹಾಪೂಜೆ ನವಗ್ರಹ ಶಾಂತಿ ವಿವಿಧ ಹೋಮ ಅನ್ನದಾನ ನಡೆಯುತ್ತದೆ.ಶ್ರೀ ಕ್ಷೇತ್ರದಲ್ಲಿ ದೇವರಿಗೆ ತುಳಸಿ ಹಾರ ವಿಶೇಷವಾಗಿರುತ್ತದೆ.

1 ಕೋಟಿ ವೆಚ್ಚದಲ್ಲಿ ರಥ ಶಿಲ್ಪಿ ಕೋಟೇಶ್ವರ ರಾಜ್ ಗೋಪಾಲ್ ಆಚಾರ್ಯ ಅವರಿಂದ ರಥ ನಿರ್ಮಾಣ

ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯನ್ನು ಪ್ರಶಸ್ತಿ ಪುರಸ್ಕೃತ ಲಕ್ಷ್ಮೀ ನಾರಾಯಣ ಆಚಾರ್ಯ ಅವರಿಂದ ಬಳುವಳಿಯಾಗಿ ಬಂದ ಕಲೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿರುವ ಪ್ರತಿಭಾವಂತ ಕಲಾವಿದ ಶ್ರೀ ರಾಜಗೋಪಾಲ ಆಚಾರ್ಯ ಅವರು

ಇಂದಿನ ಆಧುನಿಕತೆಗೆ ತಕ್ಕಂತೆ ಸಾಂಪ್ರದಾಯಿಕ ಶಾಸ್ತ್ರಗಳಿಗೆ ಯಾವುದೇ ಚ್ಯುತಿ ಬಾರದಂತೆ ಆಯಾದಿ ಅಳೆತೆಗಳನ್ನು ಶಾಸ್ತ್ರೋಕ್ತವಾಗಿ ಉಪಯೋಗಿಸಿಕೊಂಡು ರಥ ನಿರ್ಮಾಣದಲ್ಲಿ ತಮ್ಮದೇ ಆದ ಚಾಕಚಕ್ಯತೆಯೊಂದಿಗೆ ಈ ವೃತ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು. ಬಹಳ ಸುಂದರ ವಾದ ರಥ ನಿರ್ಮಾಣ ಜನಾಕರ್ಷಣೆಗೊಂಡಿದೆ.

ಈ ಕ್ಷೇತ್ರಕ್ಕೆ ಭೇಟಿ ನೀಡಿದ ಭಕ್ತರ ಅಭಿಪ್ರಾಯಗಳು

1-ನನ್ನ ಗಂಡನಿಗೆ ಕಳೆದ ಎಂಟು ತಿಂಗಳಿಂದ ನರದೌರ್ಬಲ್ಯ ಸಮಸ್ಯೆಯಿಂದ ಮಾತು ಬಾರದೆ ಆಸ್ಪತ್ರೆಯಲ್ಲಿ ಸರಿಸುಮಾರು 2ರಿಂದ 3 ಲಕ್ಷ ಖರ್ಚು ಮಾಡಿ ಯಾವುದೇ ಪರಿಹಾರ ಸಿಗದಿದ್ದಾಗ ಈ ಕ್ಷೇತ್ರಕ್ಕೆ ಬಂದು ಶ್ರೀ ದೇವರಲ್ಲಿ ನಿವೇದನೆ ಮಾಡಿಕೊಂಡಾಗ ಈಗ ನಾವು ಸಂಪೂರ್ಣ ಗುಣಮುಖರಾಗಿದ್ದೇವೆ.

—ಗಣೇಶ್ ಬಗ್ವಾಡಿ ಪತ್ನಿ

2–ಕೌಟುಂಬಿಕ ಜಂಜಾಟದಲ್ಲಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದೇವೆ. ಕಳೆದ ಎರಡು ವರ್ಷಗಳಿಂದ ಈ ಕ್ಷೇತ್ರಕ್ಕೆ ಬಂದಮೇಲೆ ನೆಮ್ಮದಿಯುಕ್ತ ಆರೋಗ್ಯ ಜೀವನ ನಡೆಸುತ್ತಿದ್ದೇವೆ

—-ನಿರ್ಮಲ ಮಾರಣಕಟ್ಟೆ

ನಾವು ಜೀವನದಲ್ಲಿ ಏನನ್ನೋ ಕಳೆದುಕೊಂಡಿದ್ದೇವೆ ಎಂಬ  ಚಿಂತನೆಯಲ್ಲಿರುವಾಗ ಈ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಮಾನಸಿಕ ನೆಮ್ಮದಿ ಮತ್ತು ನಮ್ಮೆಲ್ಲರ ಸಮಸ್ಯೆ ಪರಿಹಾರವಾಗಿರುತ್ತದೆ.

—ಕುಮಾರಿ ಸಿಂಚನ ಕೆರಾಡಿ

ಕಳೆದ ಕೆಲವು ವರ್ಷಗಳಿಂದ ಈ ದೇವಸ್ಥಾನದಲ್ಲಿ ವಾದ್ಯ ವೃಂದದವರಾಗಿದ್ದು, ಅವರ ಪ್ರಕಾರ ಕಾರಣೀಕ ಮತ್ತು  ಕಿಪ್ರಫಲದಾಯಕ ಕ್ಷೇತ್ರ ಇದಾಗಿದ್ದು, ನಂಬಿದ ಭಕ್ತರಿಗೆ ಶೀಘ್ರ ಪರಿಹಾರ ನೀಡುತ್ತದೆ.

——ಮಂಜುನಾಥ್ ದೇವಾಡಿಗ ಕೋಟೇಶ್ವರ

ಈ ಕ್ಷೇತ್ರಕ್ಕೆ ಹೀಗೆ ಬನ್ನಿ

ಬೈಂದೂರಿಂದ -33 ಕಿ.ಮೀ

ತಲ್ಲೂರಿನಿಂದ -4.50 ಕಿ.ಮೀ

ಬಸ್ರೂರಿನಿಂದ -7 ಕಿ.ಮೀ

ಕೊಲ್ಲೂರು -ಮಾರಣಕಟ್ಟೆ- ವಂಡ್ಸೆಯಿಂದ -36 ಕಿ.ಮೀ

ನೇರಳೆಕಟ್ಟೆಯಿಂದ 6 ಕಿ.ಮೀ

ಕುಂದಾಪುರದಿಂದ 8 ಕಿ,ಮೀ

ಸಿದ್ದಾಪುರ- ಕಮಲಶಿಲೆ- ನೇರಕಟ್ಟೆ- ಮಾರ್ಗವಾಗಿ- 24 ಕಿ.ಮೀ

ಕಂಡ್ಲೂರು- ಸೌಕೂರಿನಿಂದ- 7 ಕಿ.ಮೀ

ಉಡುಪಿ -ಬ್ರಹ್ಮಾವರ -ಕೋಟ ತೆಕ್ಕಟ್ಟೆ -ಆನೆಗುಡ್ಡೆ -ಕೋಟೇಶ್ವರ- ಕಲ್ಲೂರು- ಹಟ್ಟಿಯಂಗಡಿ ಕ್ರಾಸ್ ಮಾರ್ಗವಾಗಿ- 47 ಕಿ‌.ಮೀ

ಸಿದ್ದಿ ವಿನಾಯಕ ವಸತಿ ಶಾಲೆಯಿಂದ – 600ಮೀ

ಶಂಕರನಾರಾಯಣ -ಅಂಪಾರು- ನೇರಳಕಟ್ಟೆ -ಮಾವಿನಕಟ್ಟೆ ಮಾರ್ಗವಾಗಿ- 19 ಕಿ.ಮೀ

  • ದೇವಸ್ಥಾನದ ಅಭಿವೃದ್ಧಿಗೆ ಧನ ಸಹಾಯ ನೀಡುವವರಿಗೆ ಆದಾಯ ತೆರಿಗೆ ನಿಯಮದಂತೆ 80G(2) (b)of IT Act 1961 vide Reg.No ABCTS 283 IEF2021 DT24.05.2022 ದೇವಾಲಯದ ಟ್ರಸ್ಟ್ ಗೆ ಆರ್ಥಿಕ ಸಹಾಯ ಮಾಡುವ ದಾನಿಗಳಿಗೆ ರಿಯಾಯಿತಿ ಇದೆ.
  • 80G exemption available for doners

ದೇವಳದ ಸಂಪರ್ಕ ಮತ್ತು ಬ್ಯಾಂಕ್ ಖಾತೆ ವಿವರ

ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ (ರಿ)    ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು ಅಂಚೆ ಕನ್ಯಾನ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ 576230

ಶ್ರೀ ಜಯರಾಮ  ಆಡಳಿತ ಧರ್ಮದರ್ಶಿ

Call 9538955601/9611200380 (G-pay

06501016655

Canara Bank, Neralakatte

Website: WWW.Shneeshwaratemple.com

Related Articles

Back to top button
error: Content is protected !!