ಧಾರ್ಮಿಕ

ರಾಜ್ಯಾದ್ಯಂತ ಕ್ರೈಸ್ತರು ಭಕ್ತಿ, ಶ್ರದ್ಧೆ, ಸಂಭ್ರಮದ  ಕ್ರಿಸ್‌ಮಸ್ ಹಬ್ಬದ ಸಡಗರ

Views: 3

ಯೇಸುಕ್ರಿಸ್ತರ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕ್ರೈಸ್ತರು ಭಕ್ತಿ, ಶ್ರದ್ಧೆ, ಸಂಭ್ರಮದಿಂದ ಆಚರಿಸಿದರು.

ಭಾನುವಾರ ರಾತ್ರಿಯಿಂದಲೇ ಎಲ್ಲಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್‌ಮಸ್ ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಯೇಸುವಿನ ಜನನದ ವೃತ್ತಾಂತವನ್ನು ಸಾರುವ ಗೀತ ಗಾಯನ ನಡೆಯಿತು.

ಲಕ್ಷಾಂತರ ಮಂದಿ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.ಯೇಸುವಿನ ಜೀವನ ಬಿಂಬಿಸುವ ಗೋದಲಿ ಪ್ರದರ್ಶನ ಜನರನ್ನು ಆಕರ್ಷಿಸಿತ್ತು.

ಯೇಸುವಿನ ಪ್ರತಿಮೆ ಮುಂದೆ ಭಕ್ತರು ಮೊಂಬತ್ತಿ ಹಿಡಿದು ನಮನ ಸಲ್ಲಿಸಿದರು. ಆಕರ್ಷಣೆಯ ಕೇಂದ್ರವಾಗಿದ್ದ ಸಾಂಟಾಕ್ಲಾಸ್ ಬೊಂಬೆಗಳ ಮುಂದೆ ಮಕ್ಕಳನ್ನು ನಿಲ್ಲಿಸಿ ಪೋಷಕರು ಪೋಟೊ ತೆಗೆಯುತ್ತಿದ್ದುದು ಕಂಡುಬಂತು.

ಅನೇಕ ಚರ್ಚ್‌ಗಳಲ್ಲೂ ಕ್ರಿಸ್ಮಸ್ ಸಂಭ್ರಮ ಸಂಭ್ರಮದಲ್ಲಿ ಬೃಹದಾಕಾರದ ನಕ್ಷತ್ರಗಳು, ಕ್ರಿಸ್‌ಮಸ್ ವೃಕ್ಷಗಳು, ಬಣ್ಣ ಬಣ್ಣದ ಬಲೂನುಗಳು, ಗಂಟೆಗಳು ಹಾಗೂ ಸಾಂಟಾ ಕ್ಲಾಸ್‌ನ ಪ್ರತಿರೂಪಗಳು ಹಬ್ಬದ ಮೆರುಗು ಹೆಚ್ಚಿಸಿದ್ದವು.

ಹಾಗೇ, ಮಾರುಕಟ್ಟೆಗಳಲ್ಲಿ ಕ್ರಿಸ್‌ಮಸ್‌ಗಾಗಿ ಅಲಂಕಾರಿಕ ವಸ್ತುಗಳು, ಉಡುಗೊರೆಗಳ ಖರೀದಿಯೂ ಜೋರಾಗಿ ನಡೆಯಿತು. ಮಾಲ್‌ಗಳಲ್ಲೂ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು. ಭರ್ಜರಿ ವಹಿವಾಟು ನಡೆಯುತ್ತಿದೆ.

ಗ್ರಾಹಕರನ್ನು ಸೆಳೆಯಲು ಸ್ಥಾಪಿಸಿರುವ ಕ್ರಿಸ್‌ಮಸ್ ವೃಕ್ಷಗಳು ರಂಗು ರಂಗಿನ ದೀಪಗಳಿಂದ ಕಣ್ಸೆಳೆಯುತ್ತಿವೆ. ಬೇಕರಿಗಳಲ್ಲಿ ವಿಶೇಷ ಕೇಕ್‌ಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.

ಎಲ್ಲ ಚರ್ಚ್‌ಗಳಲ್ಲಿ ಬೃಹದಾಕಾರದ ನಕ್ಷತ್ರಗಳು, ಕ್ರಿಸ್‌ಮಸ್ ವೃಕ್ಷಗಳು, ಬಣ್ಣ ಬಣ್ಣದ ಬಲೂನುಗಳು, ಘಂಟೆಗಳು ಹಾಗೂ ಸಾಂತಾ ಕ್ಲಾಸ್ ಪ್ರತಿರೂಪಗಳು ಗಮನಸೆಳೆಯುತ್ತಿವೆ. ತಂಗಾಳಿಯಂತೆ ತೇಲಿ ಬರುವ ‘ಕ್ಯಾರೆಲ್ಸ್’ (ಹರ್ಷ ಗೀತೆಗಳು) ಕಿವಿಗೆ ಇಂಪು ನೀಡುತ್ತಿವೆ.

ಕ್ರೈಸ್ತ ಸಮುದಾಯದ ಮನೆಗಳಲ್ಲಿಯೂ ಸಂಭ್ರಮ ಮನೆ ಮಾಡಿದೆ. ಮನೆಗಳ ಮೇಲೆ ನಕ್ಷತ್ರಗಳು ವಿದ್ಯುತ್ ದೀಪಗಳು ಕಂಗೊಳಿಸುತ್ತಿವೆ.

Related Articles

Back to top button
error: Content is protected !!