ಇತರೆ

ಬೈಕ್​​ಗೆ ಡಿಕ್ಕಿ ಹೊಡೆದ ಟಿಪ್ಪರ್ ಸ್ಥಳದಲ್ಲೇ ಸವಾರ ಸಾವು

Views: 122

ಉತ್ತರ ಕನ್ನಡ: ಚಾಲಕನ ನಿರ್ಲಕ್ಷ್ಯದಿಂದ ಟಿಪ್ಪರ್​ ಬೈಕ್​​ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಾರವಾರ ನಗರದ ಹಬ್ಬುವಾಡ ಬಳಿ ನಡೆದಿದೆ.

ಕಾರವಾರದ ಉಮೇಶ್ ಗುನಗಿ ಮೃತ ದುರ್ದೈವಿ. ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಟಿಪ್ಪರ್​ ಬೈಕ್​​ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳೀಯರ ಆರೋಪದಂತೆ ಟಿಪ್ಪರ್ ಚಾಲಕನ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ನಡೆದಿದೆ ಎಂದು ಹೇಳುತ್ತಿದ್ದಾರೆ. ಇದರಿಂದ ಘಟನೆ ನಡೆದ ಸ್ಥಳದಲ್ಲಿ ನೂರಾರು ಜನರು ಸೇರಿದ್ದಾರೆ. ಸದ್ಯ ಈ ಸಂಬಂಧ ಸ್ಥಳಕ್ಕೆ ಕಾರವಾರ ಸಂಚಾರಿ ಪೋಲಿಸರ ದೌಡಾಯಿಸಿದ್ದು ಬಿಗುವಿನ ವಾತಾವರಣ ಏರ್ಪಟ್ಟಿದೆ.

Related Articles

Back to top button
error: Content is protected !!