ಡಿಕೆಶಿ ನೂತನ ಸಚಿವ ಸಂಪುಟದಲ್ಲಿ ಯಾರು ಔಟ್..ಯಾರಿಗೆ ಮಂತ್ರಿ ಪಟ್ಟ?
Views: 241
ಕನ್ನಡ ಕರಾವಳಿ ಸುದ್ದಿ:ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಸಚಿವ ಸಂಪುಟ ವಿಸರ್ಜನೆಯಾಗಿದ್ದು, ಮುಂದಿನ ಮುಖ್ಯಮಂತ್ರಿ ಪದಗ್ರಹಣದ ಜೊತೆಗೆ ನೂತನ ಸಚಿವ ಸಂಪುಟ ರಚನೆಯಾಗಬೇಕಿದೆ.
ಸದ್ಯಕ್ಕೆ ತಿಳಿದ ಮಾಹಿತಿ ಪ್ರಕಾರ, ಸಿದ್ದರಾಮಯ್ಯ ಪರವಾಗಿ 30ರಷ್ಟು ಹಿರಿಯ ಶಾಸಕರು, ಸಚಿವರು ಮಾತ್ರ ಇದ್ದಾರೆ. ಡಿಕೆಶಿ ಪರವಾಗಿ ಶಾಸಕರ ಸಂಖ್ಯೆ 105ಕ್ಕೇರಿದೆಯಂತೆ. ಇದಕ್ಕೆ ಕಾರಣವಾಗಿರೋದು ಹೈಕಮಾಂಡ್ ಡಿಕೆಶಿ ಕಡೆಗೆ ತಿರುಗಿರುವುದು ಮತ್ತು ಮುಖ್ಯಮಂತ್ರಿ ಬದಲಾವಣೆ ಜೊತೆಗೆ ಹೆಚ್ಚಿನ ಹೊಸಬರಿಗೆ ಸಚಿವ ಸ್ಥಾನ ಕೊಡುವಂತೆ ಸೂಚನೆ ಕೊಟ್ಟಿರುವುದು. ಇದು ತಿಳಿಯುತ್ತಲೇ ಸಕ್ಕರೆ ಇರುವಲ್ಲಿಗೆ ಇರುವೆ ಹೋಗುವಂತೆ ಈವರೆಗೂ ಸಿದ್ದರಾಮಯ್ಯ ಜೊತೆಗಿದ್ದವರು ಸಚಿವ ಸ್ಥಾನದ ಆಸೆಯಲ್ಲಿ ಡಿಕೆ ಸೇರಿಕೊಂಡಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿದ್ದ ಸುಮಾರು 10 ರಿಂದ 12 ಹಿರಿಯ ಸಚಿವರನ್ನು ಕೈಬಿಡುವ ಸಾಧ್ಯತೆಗಳಿವೆ.4 ಉಪಮುಖ್ಯಮಂತ್ರಿಗಳು, ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನ ಕಾಯ್ದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ನಾಲ್ವರು ಉಪಮುಖ್ಯಮಂತ್ರಿಗಳನ್ನು ನೇಮಿಸುವ ಕುರಿತು ಚಿಂತನೆ ನಡೆಸಿದೆ.
ಡಿ.ಕೆ.ಶಿವಕುಮಾರ್ ಪದಗ್ರಹಣ ಖಚಿತ ಎಂಬ ಮಾಹಿತಿ ಲಭ್ಯವಾಗುತ್ತಿದ್ದು, ಪ್ರಮಾಣ ಸ್ವೀಕಾರಕ್ಕೆ ಮುಹೂರ್ತ ಸಹ ನಿಗದಿ ಮಾಡಲಾಗುತ್ತಿದೆ. ಇದೇ ವೇಳೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಕಾಂಗ್ರೆಸ್ ಶಾಸಕರು ಪ್ರಯತ್ನ ನಡೆಸುತ್ತಿದ್ದು, ದೆಹಲಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಕ್ಯಾಬಿನೆಟ್ ರಚನೆಯ ಬಗ್ಗೆ ಹೈಕಮಾಂಡ್ ಜೊತೆ ಮಾತುಕತೆ ನಡೆಸಲಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಜಿಲ್ಲಾವಾರು ಪ್ರಾತಿನಿಧ್ಯದ ಪ್ರಕಾರ ಆಕಾಂಕ್ಷಿಗಳ ಪಟ್ಟಿ ಹೀಗಿದೆ.
ಮೈಸೂರು : ಅನಿಲ್ ಚಿಕ್ಕಮಾದು, ತನ್ವೀರ್ ಸೇಠ್
ತುಮಕೂರು : ಡಾ.ಜಿ.ಪರಮೇಶ್ವರ, ಟಿ.ಬಿ ಜಯಚಂದ್ರ
ಬಳ್ಳಾರಿ : ಬಿ.ನಾಗೇಂದ್ರ
ಬೆಂಗಳೂರು ಗ್ರಾಮಾಂತರ : ಶರತ್ ಬಚ್ಚೇಗೌಡ
ಬೆಂಗಳೂರು ದಕ್ಷಿಣ : ಎಚ್.ಸಿ.ಬಾಲಕೃಷ್ಣ
ಚಿಕ್ಕಮಗಳೂರು : ನಯನ ಮೋಟಮ್ಮ
ಕೊಪ್ಪಳ : ಶಿವರಾಜ ತಂಗಡಗಿ, ಬಸವರಾಜ ರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ್
ಹಾಸನ : ಕೆಎಂ ಶಿವಲಿಂಗೇಗೌಡ
ದಕ್ಷಿಣ ಕನ್ನಡ: ಯುಟಿ ಖಾದರ್
ಕೊಡಗು : ಎಎಸ್ ಪೊನ್ನಣ್ಣ
ಚಾಮರಾಜನಗರ : ಎ.ಆರ್ ಕೃಷ್ಣಮೂರ್ತಿ
ವಿಧಾನ ಪರಿಷತ್ ಸದಸ್ಯರು : ಬಿಕೆ ಹರಿಪ್ರಸಾದ್, ಡಾ.ಯತೀಂದ್ರ ಸಿದ್ದರಾಮಯ್ಯ, ಎನ್.ಎಸ್ ಬೋಸರಾಜು, ಸಲೀಂ ಅಹ್ಮದ್, ಪುಟ್ಟಣ್ಣ
ಮಂಡ್ಯ : ಪಿಎಂ ನರೇಂದ್ರಸ್ವಾಮಿ, ಚೆಲುವರಾಯಸ್ವಾಮಿ
ಚಿಕ್ಕಬಳ್ಳಾಪುರ : ಎಸ್ಎನ್ ಸುಬ್ಬಾರೆಡ್ಡಿ
ಕೋಲಾರ : ಎಸ್.ಎನ್ ನಾರಾಯಣಸ್ವಾಮಿ, ಎಂ.ರೂಪಕಲಾ
ಶಿವಮೊಗ್ಗ : ಬೇಳೂರು ಗೋಪಾಲಕೃಷ್ಣ
ದಾವಣಗೆರೆ : ಎಸ್.ಎಸ್.ಮಲ್ಲಿಕಾರ್ಜುನ
ಚಿತ್ರದುರ್ಗ : ಟಿ.ರಘುಮೂರ್ತಿ
ಹಾವೇರಿ : ರುದ್ರಪ್ಪ ಮಾನಪ್ಪ ಲಮಾಣಿ
ಧಾರವಾಡ : ಸಂತೋಷ್ ಲಾಡ್
ಗದಗ: ಎಚ್.ಕೆ.ಪಾಟೀಲ್
ರಾಯಚೂರು : ಹಂಪನಗೌಡ ಬಾದರ್ಲಿ
ಬೀದರ್ : ಈಶ್ವರ್ ಖಂಡ್ರೆ
ಕಲಬುರಗಿ: ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಡಾ.ಶರಣ ಪ್ರಕಾಶ್ ಪಾಟೀಲ್
ವಿಜಯಪುರ : ಅಪ್ಪಾಜಿ ನಾಡಗೌಡ, ಶಿವಾನಂದ ಪಾಟೀಲ್
ಬಾಗಲಕೋಟೆ: ಬಿ.ಬಿ.ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ್, ಆರ್.ಬಿ.ತಿಮ್ಮಾಪುರ್
ಬೆಂಗಳೂರು ನಗರ : ಕೃಷ್ಣ ಬೈರೇಗೌಡ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಎಂ.ಕೃಷ್ಣಪ್ಪ, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್, ಬೈರತಿ ಸುರೇಶ್, ಎನ್.ಎ. ಹ್ಯಾರಿಸ್
ಬೆಳಗಾವಿ : ಲಕ್ಷ್ಮೀ ಹೆಬ್ಬಾಳ್ಕರ್, ಗಣೇಶ್ ಹುಕ್ಕೇರಿ, ಲಕ್ಷ್ಮಣ ಸವದಿ, ಅಶೋಕ್ ಪಟ್ಟಣ್
ಯಾದಗಿರಿ : ಶರಣಬಸಪ್ಪ ದರ್ಶನಾಪುರ್
ಉತ್ತರ ಕನ್ನಡ : ಮಂಕಾಳ ವೈದ್ಯ






