ಶಿಕ್ಷಣ

NEET ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

Views: 27

ಕನ್ನಡ ಕರಾವಳಿ ಸುದ್ದಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯಲ್ಲಿ ನಡೆದಿದೆ.

ಜಲಾಲ್ಪುರ ಗ್ರಾಮದ ನಿವಾಸಿ ಅಂಕಿತಾ ಸಾಂಗ್ಲೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಕೇವಲ 166 ಅಂಕಗಳನ್ನು ಗಳಿಸಿದ ನಂತರ ಆಕೆ ಒತ್ತಡಕ್ಕೊಳಗಾಗಿದ್ದಳು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಪೊಲೀಸರಿಗೆ ಮರಾಠಿಯಲ್ಲಿ ಕೈಬರಹದ ಡೆತ್‌ನೋಟ್‌ ಸಿಕ್ಕಿದೆ. ನೀವು ನನಗೆ ತುಂಬಾ ಪ್ರೀತಿ ಕೊಟ್ಟಿದ್ದೀರಿ. ಆದರೆ, ನಿಮ್ಮ ಒಂದೇ ಒಂದು ಆಸೆಯನ್ನು ನಾನು ಪೂರೈಸಲು ಸಾಧ್ಯವಾಗಲಿಲ್ಲ. ಅಮ್ಮ, ನೀವು ಪ್ರತಿಯೊಂದು ಕಷ್ಟದಲ್ಲೂ ನನ್ನನ್ನು ಸ್ನೇಹಿತೆಯಂತೆ ಬೆಂಬಲಿಸಿದ್ದೀರಿ. ದಾದಾ ನೀನು ಕೂಡ ನನಗೆ ತುಂಬಾ ಬೆಂಬಲ ನೀಡಿದ್ದೀಯಾ. ನೀನು ನನ್ನನ್ನು ಅಮ್ಮ ಮತ್ತು ಅಪ್ಪನಿಗಿಂತ ಹೆಚ್ಚಾಗಿ ಪ್ರೀತಿಸಿದ್ದೀಯಾ.

ನಾನು ನೀಟ್ ಓದುತ್ತಿದ್ದಾಗಲೂ, ನೀವು ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೀರಿ. ನಾನು ವಿಫಲವಾಗಿದ್ದೇನೆ. ನಿಮ್ಮ ಆಸೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಅಣ್ಣ, ದಯವಿಟ್ಟು ಅಮ್ಮ ಮತ್ತು ಅಪ್ಪನನ್ನು ಚೆನ್ನಾಗಿ ನೋಡಿಕೊ. ಅವರಿಗೆ ಏನೂ ಕೊರತೆಯಾಗಲು ಬಿಡಬೇಡಿ’ ಎಂದು ಡೆತ್‌ನೋಟ್‌ನಲ್ಲಿ ತಿಳಿಸಿದ್ದಾಳೆ. ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button
error: Content is protected !!