ರಾಜಕೀಯ

ಗೋವಾ ಬಿಜೆಪಿ ಶಾಸಕಿ ನಿಧನ

Views: 48

ಕನ್ನಡ ಕರಾವಳಿ ಸುದ್ದಿ: ಅನಾರೋಗ್ಯದಿಂದ ಬಳಲುತ್ತಿದ್ದ ಗೋವಾ ಬಿಜೆಪಿ ಶಾಸಕಿ ಮತ್ತು ಮಾಜಿ ಸಚಿವೆ ಜೆನ್ನಿಫರ್ ಮಾನ್ಸೆರಾಟ್ಟೆ (56) ನಿಧನರಾಗಿದ್ದಾರೆ.

ಉತ್ತರ ಗೋವಾ ಜಿಲ್ಲೆಯ ತಲೈಗಾವೊ ವಿಧಾನಸಭಾ ಕ್ಷೇತ್ರವನ್ನುಅವರು ಪ್ರತಿನಿಧಿಸುತ್ತಿದ್ದರು. ಅವರ ನಿಧನಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂತಾಪ ಸೂಚಿಸಿದ್ದಾರೆ.

ಜೆನ್ನಿಫರ್ ಮಾನ್ಸೆರಾಟ್ಟೆ 2012 ರಿಂದ ತಲೈಗಾವೊ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಮೂರು ಭಾರಿ ಅವರು ಶಾಸಕಿಯಾಗಿದ್ದರು. 2019 ರಲ್ಲಿ ಅವರಿಗೆ ಸಚಿವೆ ಸ್ಥಾನ ಸಹ ಲಭಿಸಿತ್ತು. 2019 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ 10 ಕಾಂಗ್ರೆಸ್ ಶಾಸಕರಲ್ಲಿ ಅವರು ಜೆನ್ನಿಫರ್‌ ಸ ಒಬ್ಬರು.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಿಎಂ ಪ್ರಮೋದ್ ಸಾವಂತ್, ತಲೈಗಾವೊದ ಮೊದಲ ಮಹಿಳಾ ಶಾಸಕಿ ಮತ್ತು ಮೂರು ಬಾರಿ ಶಾಸಕಿಯಾಗಿ ಜನ್ನಿಫರ್‌ ಸೇವೆ ಸಲ್ಲಿಸಿದ್ದಾರೆ. ಅವರು ಇಹಲೋಕ ತ್ಯೆಜಿಸಿದ್ದು, ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ ಎಂದು ಪ್ರಾರ್ಥಸಿದ್ದಾರೆ.

Related Articles

Back to top button
error: Content is protected !!