ವಕ್ವಾಡಿ ಗ್ರಾಮ ಆಡಳಿತ ಕಛೇರಿಗೆ ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಗಣಕ ಮತ್ತು ಮುದ್ರಣ ಯಂತ್ರದ ಕೊಡುಗೆ

Views: 147
ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಗ್ರಾಮದ ಈ ಹಿಂದಿನ ಗ್ರಾಮ ಆಡಳಿತ ಅಧಿಕಾರಿಯಾದ ಧೀರಜ್ ಮತ್ತು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಯಾದ ಮೋನಿಶಾ ಮತ್ತು ಗ್ರಾಮ ಸಹಾಯಕರಾದ ಕೃಷ್ಣ ರವರು ವಕ್ವಾಡಿ ಗ್ರಾಮದ ಸಾರ್ವಜನಿಕರಿಗೆ ಒದಗಿಸಿದ ಮತ್ತು ಒದಗಿಸುತ್ತಿರುವ ಉತ್ತಮ ಸೇವೆಯನ್ನು ಗುರುತಿಸಿ ಇಂದು ಗ್ರಾಮ ಆಡಳಿತ ಅಧಿಕಾರಿ ಕಛೇರಿಯ 75% ಕೆಲಸಗಳು ಗಣಕೀಕೃತ ಗೊಂಡಿರುವುದನ್ನು ಮನಗಂಡು ವಕ್ವಾಡಿ ಗ್ರಾಮ ಆಡಳಿತ ಅಧಿಕಾರಿ ಕಛೇರಿಗೆ ದಾನಿಗಳಾದ ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ರವರು ಅತ್ಯತ್ತಮ ಗುಣಮಟ್ಟದ ಗಣಕಯಂತ್ರ ಮತ್ತು ಮುದ್ರಣಯಂತ್ರವನ್ನು ಒದಗಿಸಿರುತ್ತಾರೆ.
ಈ ಸಂದರ್ಭದಲ್ಲಿ ಈ ಹಿಂದಿನ ಗ್ರಾಮ ಆಡಳಿತ ಅಧಿಕಾರಿ ಧೀರಜ್, ಗ್ರಾಮ ಆಡಳಿತ ಅಧಿಕಾರಿ ಮೋನಿಶಾ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಹಾಗೂ ದಾನಿಗಳ ಪರವಾಗಿ ವಕೀಲರು ಸಂದೇಶ ಶೆಟ್ಟಿ ರವರು ಹಾಜರಿದ್ದರು.
ದಾನಿಗಳಿಗೆ ನಮ್ಮ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಮತ್ತು ಉತ್ತಮ ರೀತಿಯಲ್ಲಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಿ ತಮ್ಮ ಕರ್ತವ್ಯವನ್ನು ಗುರುತಿಸಿಕೊಳ್ಳುವಂತೆ ಕೆಲಸ ನಿರ್ವಹಿಸಿದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಮತ್ತು ಗ್ರಾಮಸಹಾಯಕರಿಗೆ ಅಭಿನಂದನೆ ಸಲ್ಲಿಸಲಾಯಿತು.






