ಜನಮನ

81ರ ವಯಸ್ಸಿನಲ್ಲಿ ಎರಡನೇ ಮದುವೆಯಾದ ಮಾಜಿ ಐಪಿಎಸ್ ಅಧಿಕಾರಿ

Views: 263

ಉತ್ತರಪ್ರದೇಶ : ಇಳಿ ವಯಸ್ಸಿನಲ್ಲಿ ಸಂಗಾತಿ ಅಗಲಿಕೆ, ದೂರಾದ ಮಕ್ಕಳ ನೋವು ಅತಿಯಾಗಿ ಕಾಡುವ ನೋವಾಗಿರುತ್ತದೆ. ಇಂತಹ ಏಕಾಂತ ಭರಿಸಲು ಸಾಧ್ಯವಾಗದ ಹಿನ್ನಲೆ ಮಾಜಿ ಐಪಿಎಸ್ ಅಧಿಕಾರಿ 81ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಜೊತೆಗೆ ಅವರು ಎರಡನೇ ಬಾರಿಗೆ ಹಸೆಮಣೆ ಏರಿದ್ದಾರೆ. ದಾರಾಪುರಿ ಅವರ ಹೆಂಡತಿ 2022ರಲ್ಲಿ ಸಾವನ್ನಪ್ಪಿದ್ದರು. ಅವರ ಇಬ್ಬರು ಗಂಡು ಮಕ್ಕಳು ವೈದ್ ದಾರಾಪುರಿ ಮತ್ತು ರಾಹುಲ್ ದಾರಾಪುರಿ ತಂದೆಯಿಂದ ದೂರವಿದ್ದರೆ, ಅವರ ಮಗಳು ಸುಲೋಚನಾ ದಾರಾಪುರಿ ಗಂಡನ ಮನೆಯಲ್ಲಿ ನೆಲೆಸಿದ್ದಾರೆ. ಹೆಂಡತಿ ಅಗಲಿಕೆ ಜೊತೆಗೆ ಮಕ್ಕಳು ಜೊತೆಯಲ್ಲಿ ಇರದೇ ಇರುವುದು ಅವರಲ್ಲಿ ಒಂಟಿತನ ಕಾಡುವಂತೆ ಮಾಡಿತ್ತು. ಹೀಗಾಗಿ ಅವರು ಇಳಿವಯಸ್ಸಿನಲ್ಲಿ ಮತ್ತೊಂದು ಮದುವೆ ಆಗಿದ್ದಾರೆ.ಸಮಾಜ ಮತ್ತು ಜನರ ಕಲ್ಯಾಣದ ಬಗ್ಗೆ ಸದಾ ಯೋಚಿಸುತ್ತಿದ್ದರು. ಇತ್ತೀಚಿಗೆ ಅವರು ಅನಾರೋಗ್ಯಕ್ಕೂ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಕೊನೆಗಾಲದ ಸಾಂಗಂತ್ಯಕ್ಕಾಗಿ ಸಾಧಾರಣ ಮಹಿಳೆಯೊಬ್ಬರ ಕೈ ಹಿಡಿದಿದ್ದಾರೆ.

ನಿವೃತ್ತಿ ಬಳಿಕ ಅವರು ಬುಡಕಟ್ಟು, ದಲಿತ ಮತ್ತು ಅಲ್ಪಸಂಖ್ಯಾತ ಜನರಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಬೇಡ್ಕರ್ ಮಹಾಸಭಾ ಸೇರಿದಂತೆ ಅನೇಕ ಸಂಘಟನೆಗಳಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೇಕ ಸಂಘಟನೆಗಳಲ್ಲಿ ಅವರು ಕ್ರಿಯಾಶೀಲ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಕುಟುಂಬಸ್ಥರು ತಿಳಿಸಿದ್ದಾರೆ.

Related Articles

Back to top button
error: Content is protected !!