2024ರ ಲೋಕ ಸಭೆಯಲ್ಲಿ ಬಿಜೆಪಿ ಎದುರಿಸಲು 14 ಪಕ್ಷದ ಮುಖಂಡರ ಸಭೆ

Views: 0
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮುಂದಾಳತ್ವದಲ್ಲಿ ಸಮಾನ ಅಭಿಪ್ರಾಯ ಹೊಂದಿದ 14 ರಾಜಕೀಯ ಪಕ್ಷದ ಮುಖಂಡರು 2024ರ ಲೋಕಸಭೆಯಲ್ಲಿ ಬಿಜೆಪಿಯನ್ನು ಎದುರಿಸಲು ತಂತ್ರಗಾರಿಕೆಗೆ ಶುಕ್ರವಾರ ಪಾಟ್ನಾದಲ್ಲಿ ಸಭೆ ನಡೆದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಮಾಜಿ ಮುಖ್ಯಮಂತ್ರಿ ಉದ್ಬವ ಠಾಕ್ರೆ, ಎನ್ ಸಿಪಿಯ ಶರದ್ ಪವಾರ್, ಜೆಎಂ ನ ಹೇಮಂತ ಸೊರೇನ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಸಿಪಿಐಯ ಡಿ. ರಾಜಾ, ನ್ಯಾಷನಲ್ ಕಾನ್ಫರೆನ್ಸ್ ನ ಫಾರೂಕ್ ಅಬ್ದುಲ್ಲಾ, ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದಾರೆ.
ಒಮ್ಮತ ಅಭಿಪ್ರಾಯದ ಪಕ್ಷಗಳು : ಕಾಂಗ್ರೆಸ್, ಎಎಪಿ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಸಿಪಿಐ, ಸಿಪಿಐ (ಎಂ) ಸಿಪಿಐ( ಎಂ.ಎಲ್), ಜೆಎಂಎಂ, ಎನ್ ಸಿಪಿ, ಜೆಡಿಯು, ಆರ್ ಜೆ ಡಿ, ಶಿವಶೇನೆ (ಯುಟಿ), ಜಮ್ಮು ಕಾಶ್ಮೀರ್ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ಪಕ್ಷಗಳು ಭಾಗವಹಿಸಿದ್ದವು.