ಹಾವನ್ನು ಆಟಿಕೆ ಎಂದು ತಿಳಿದು ಕಚ್ಚಿ ಬಿಸಾಕಿದ ಒಂದು ವರ್ಷದ ಪೋರ!.. ಬಾಲಕನಿಗೆ ಆಮೇಲೆ ಏನಾಯ್ತು?

Views: 219
ಗಯಾ: ಮನುಷ್ಯನೇ ಹಾವನ್ನು ಕಚ್ಚಿ ಕೊಂದ ಘಟನೆ ಕೇಳಿರೋದು ಅಪರೂಪ. ಬಿಹಾರದಲ್ಲಿ ಇಂತಹದೊಂದು ಅಚ್ಚರಿಯ ಘಟನೆ ನಡೆದು ಹೋಗಿದೆ, ಮೂರು ಅಡಿ ಉದ್ದದ ಹಾವನ್ನು ಒಂದು ವರ್ಷದ ಪುಟ್ಟ ಪೋರನೊಬ್ಬ ಕಚ್ಚಿ ಸಾಯಸಿ ಬಿಟ್ಟಿದ್ದಾನೆ. ಆ ಪುಟ್ಟ ಹುಡುಗನ ತಾಯಿ ನೋಡುವವರೆಗೂ ಆತ ಹಾವನ್ನು ಕಚ್ಚುತ್ತಲೇ ಇದ್ದ. ದೃಶ್ಯ ಕಂಡು ಹೈರಾಣಾದ ತಾಯಿಯೇ ಮಗುವಿನ ಬಾಯಿಂದ ಹಾವನ್ನು ಕಿತ್ತೆಸೆದಿದ್ದಾರೆ.
ಇದು ಬಿಹಾರದ ಗಯಾ ಜಿಲ್ಲೆಯಲ್ಲಿ ಕತ್ಹೇಪುರ ಅನ್ನೋ ಗ್ರಾಮದಲ್ಲಿ ನಡೆದಿರುವ ಘಟನೆ. ಬಾಲಕ ಅಂಗಳದಲ್ಲಿ ಆಟ ಆಡುತ್ತಿರುವಾಗ ಹಾವೊಂದು ಬಂದಿದೆ. ಅದನ್ನು ಆಟಿಗೆಯೆಂದು ತಿಳಿದ ಒಂದು ವರ್ಷದ ಬಾಲಕ ಅದರೊಂದಿಗೆ ಆಟವಾಡಲು ಶುರು ಮಾಡಿದ್ದಾನೆ. ಕೊನೆಗೆ ಬಾಯಿಯಲ್ಲಿಟ್ಟುಕೊಂಡು ಆಟಿಗೆಯನ್ನು ಕಚ್ಚುವಂತೆ ಕಚ್ಚಿದ್ದಾನೆ. ಹಾವಿನ ಮಧ್ಯಭಾಗವನ್ನು ಬಾಲಕ ಕಚ್ಚಿದ್ದು ಹಾವು ಅಲ್ಲಿಯೇ ಸತ್ತು ಹೋಗಿದೆ.
ಮಗುವಿನ ಬಾಯಲ್ಲಿದ್ದ ಹಾವನ್ನು ಕಂಡು ಬೆರಗಾದ ತಾಯಿ, ಓಡಿ ಬಂದು ಮಗುವಿನ ಬಾಯಲ್ಲಿದ್ದ ಹಾವನ್ನು ಕಿತ್ತು ದೂರ ಎಸೆದಿದ್ದಾಳೆ. ಕೊನೆಗೆ ಹಾವುನ್ನು ನೋಡಿದಾಗ ಸತ್ತು ಹೋಗಿತ್ತು.
ಕೂಡಲೇ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಓಡಿದ್ದಾಳೆ. ಮಗುವಿನ ದೇಹದಲ್ಲಿ ವಿಷವೇನಾದ್ರೂ ಹೋಗಿದೆಯಾ. ಅಥವಾ ಬೇರೆ ರೀತಿಯ ಅಪಾಯವೆನಾದ್ರೂ ಆಗಿದೆಯಾ ಎಂದು ಪರೀಕ್ಷೆ ಮಾಡಿಸಿದ್ದಾಳೆ. ಪರೀಕ್ಷೆ ಮಾಡಿದ ವೈದ್ಯರು ಕೂಡ ಬೆರಗಾಗಿ ಹೋಗಿದ್ದಾರೆ. ನೋಡಿದ್ರೆ ಬಾಲಕನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿರಲಿಲ್ಲ. ಪುಟ್ಟ ಪೋರ ಆರಾಮಾಗಿಯೇ ಇದ್ದ. ಸದ್ಯ ಬಾಲಕನ ಈ ಕಾರ್ಯ ಬಹುಚರ್ಚಿತ ವಿಷಯವಾಗಿದೆ. ಅವನು ಹಾವನ್ನು ಕಚ್ಚಿ ಕೊಂದ ವಿಷಯ ಸುದ್ದಿ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ.






