ಹನಿಮೂನ್ ಅರ್ಧದಲ್ಲೇ ಮುಗಿಸಿ ಊರಿಗೆ ಬಂದು ನವವಧು ಆತ್ಮಹತ್ಯೆ
Views: 119
ಕನ್ನಡ ಕರಾವಳಿ ಸುದ್ದಿ: ಹನಿಮೂನ್ ಅರ್ಧದಲ್ಲೇ ಮುಗಿಸಿ ಊರಿಗೆ ಬಂದು ಬಳಿಕ ನವವಧು ಗಾನವಿ(26) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಕ್ಟೋಬರ್ 29ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟು, ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು. ಕಳೆದ ಹತ್ತು ದಿನಗಳ ಹಿಂದೆ ಶ್ರೀಲಂಕಾಗೆ ಹನಿಮೂನ್‌ಗೆಂದು ಹೋಗಿದ್ದರು. ಆದ್ರೆ, ಅಲ್ಲಿ ಅದೇನಾಯ್ತೋ ಏನೋ ಅರ್ಧಕ್ಕೆ ಶ್ರೀಲಂಕಾದಿಂದ ಇಬ್ಬರು ವಾಪಸ್ಸಾಗಿದ್ದರು. ಬಳಿಕ ನೇಣಿಗೆ ಹಾಕಿಕೊಳ್ಳಲು ಯತ್ನಿಸಿದ್ದಾರೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಯುವತಿಯ ಕಡೆಯವರು ಗಾನವಿಯ ಪತಿ ಸೂರಜ್ ಆತನ ಅಣ್ಣ ಸಂಜಯ್ ಹಾಗೂ ತಾಯಿ ಜಯಂತಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಗಾನವಿಯ ದೊಡ್ಡಮ್ಮ ಸಾವಿನ ಬಗ್ಗೆ ಮಾತನಾಡಿದ್ದು, ಒಳ್ಳೆಯ ಸಂಬಂದ ಎಂದು ನಾನೇ ಮದುವೆ ಮಾಡಿಸಲು ಮುಂದಾದೆ. ಅವರು ಹೇಳಿದಂತೆ ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಟ್ಟೆವು. ವರದಕ್ಷಿಣೆ,ಒಡವೆಗಾಗಿ ಬೇಡಿಕೆ ಇಟ್ಟು ಚಿತ್ರಹಿಂಸೆ ನೀಡಿದ್ದಾರೆ. ಮದುವೆ ಆಗಿ ತಿಂಗಳಾದರೂ ನಮ್ಮ ಹುಡುಗಿಯನ್ನು ಆತ ಟಚ್ ಕೂಡಾ ಮಾಡಿಲ್ಲ. ಹನಿಮೂನ್ ಅನ್ನು ಪದೇ ಪದೇ ಮುಂದೆ ಹಾಕುವ ಕೆಲಸ ಮಾಡುತ್ತಿದ್ದ. ಹನಿಮೂನ್‌ಗೆ ಹೋದರೂ ಇಬ್ಬರ ನಡುವೆ ಏನು ನಡೆದಿಲ್ಲ. ಮದುವೆ ನಡೆದ ದಿನದಿಂದಲೂ ಗಾನವಿಗೆ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಒಡವೆ ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟು ಚಿತ್ರಹಿಂಸೆ ನೀಡಿದ್ದಾರೆ. ಆತನಲ್ಲಿದ್ದ ಸಮಸ್ಯೆಯನ್ನು ಮುಚ್ಚಿಡಲು ಗಾನವಿಗೆ ಹಿಂಸೆ ನೀಡಿದ್ದಾನೆ. ಕಳೆದ ಭಾನುವಾರವೇ ಶ್ರೀಲಂಕಾಕ್ಕೆ ಹನಿಮೂನ್‌ಗೆ ಹೋಗಿ ವಾಪಾಸ್ ಬಂದಿದ್ದಾರೆ. ಅಮ್ಮನ ನೋಡೋಕೆ ಮನೆಗೆ ಕರ್ಕೊಂಡು ಬಂದೆ ಅಂತಾನೆ. ಅಮ್ಮನ ಜೊತೆ ಇರೋಕೆ ಯಾಕೆ ಮದುವೆ ಮಾಡಿಕೊಳ್ಳಬೇಕಿತ್ತು? ಪ್ರಶ್ನೆ ಮಾಡಿದ್ರೆ ನಿಮ್ಮ ಮಗಳನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಅಂತಿದ್ದ. ಮನೆಗೆ ಕರೆದುಕೊಂಡು ಬರುವಾಗ ನಮ್ಮ ಮಗಳು ಕಾಲು ಹಿಡಿದು ಬೇಡಿಕೊಂಡಳು. ನನ್ನ ಕಳಿಸಬೇಡ ಸೂರಜ್ ನಿನ್ನ ಜೊತೆ ಇರ್ತೀನಿ ನಮ್ಮ ಮನೆಯವರ ಮರ್ಯಾದೆ ಹೋಗುತ್ತೆ ಅಂತ ಹೇಳುತ್ತಿದ್ದಳು. ಏನೇ ಹಿಂಸೆ ಆದ್ರೂ ನಾನು ಇಲ್ಲೇ ಇರ್ತೀನಿ ಅಂತ ಬೇಡಿಕೊಂಡಳು ಎಂದು ಹೇಳಿದ್ದಾರೆ.






