ರಾಜಕೀಯ

ಸೌಜನ್ಯ ಕೊಲೆ ಪ್ರಕರಣ:ಸುಪ್ರೀಂ ಕೋರ್ಟಿಗೆ ಹೋದರೆ ವೆಚ್ಚ ಭರಿಸುವ ಭರವಸೆ ಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

Views: 43

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಬಿಜಪಿ ನಾಯಕರ ಮಧ್ಯೆ ಎಲ್ಲವು ಸರಿ ಇರಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೌಜನ್ಯಳ ಮನೆಗೆ ಭೇಟಿ ಹೇಳಿಕೆ ನೀಡಿದ್ದರಿಂದ ಹಲವು ಬಿಜೆಪಿ ನಾಯಕರಿಗೆ ಇರಿಸು ಮುರಿಸು ಉಂಟಾಗಿದೆ ಎಂಬ ಮಾಧ್ಯಮ ವರದಿಗಳಿಗೆ ವಿಜಯೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದು. ಈ ಕಾರ್ಯಕ್ರಮವು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಪ್ರಶ್ನೆಗೆ ವಿಜಯೇಂದ್ರ ಉತ್ತರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಬಿಜೆಪಿಯವರು ಧರ್ಮಸ್ಥಳದ ಪರವೋ ಅಥವಾ ಸೌಜನ್ಯ ಪರವೋ?” ಎಂದು ಕೇಳಿದ ಪ್ರಶ್ನೆಗೆ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. “ಭಾರತೀಯ ಜನತಾ ಪಾರ್ಟಿ ಮಂಜುನಾಥನ ಭಕ್ತರ ಪರವಾಗಿ ಪಕ್ಷಾತೀತವಾಗಿ ಧರ್ಮಸ್ಥಳ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.” ಎಂದು ಅವರು ಹೇಳಿದರು.

ಸರಕಾರಕ್ಕೆ ಸಮೀರ್ ನಂತಹ ದೇಶದ್ರೋಹಿಯನ್ನು ಒದ್ದು ಒಳಗೆ ಹಾಕಲು ಆಗುತ್ತಿಲ್ಲ. ರಾಜ್ಯ ಕಾಂಗ್ರೆಸ್‌ ಸರಕಾರವು ಸಮೀರ್ ಜಾಮೀನು ರದ್ದು ಮಾಡುವಂತೆ ಯಾಕೆ ಅರ್ಜಿ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯನವರ ಪ್ರಶ್ನೆಗೆ ಅವರು ಈ ರೀತಿ ಉತ್ತರ ನೀಡಿದರು. ಇದೆಲ್ಲ ಹಿನ್ನೆಲೆಯಲ್ಲಿ ನಾವು ಧರ್ಮಸ್ಥಳ ಚಲೋ ಹಮ್ಮಿಕೊಂಡಿದ್ದೆವು ಎಂದು ತಿಳಿಸಿದರು.

ಸೌಜನ್ಯ ವಿಚಾರ ಬಂದಾಗ ರಾಜ್ಯಾಧ್ಯಕ್ಷನಾಗಿ ನನಗೂ ಅನಿಸಿತ್ತು. ಸೌಜನ್ಯ ತಾಯಿ, ಕುಟುಂಬದ ಸದಸ್ಯರನ್ನು ಭೇಟಿ ಮಾಡಬೇಕೆಂದು ನಾನು ತೀರ್ಮಾನ ಮಾಡಿದೆ. ಸೌಜನ್ಯ ಹತ್ಯೆಯಾಗಿ 12 ವರ್ಷ ಕಳೆದರೂ, ತಡವಾಗಿದ್ದರೂ, ಮಾನವೀಯತೆ ದೃಷ್ಟಿಯಿಂದ ಅಧ್ಯಕ್ಷನಾಗಿ ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಮುಂದೆ ಸುಪ್ರೀಂ ಕೋರ್ಟಿಗೆ ಹೋದರೆ ಅದರ ವೆಚ್ಚ ಭರಿಸುವ ಭರವಸೆ ಕೊಟ್ಟಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದರು.

ರಾಜ್ಯದ ಮುಖ್ಯಮಂತ್ರಿಗಳು ಆ ಕೋಟ್ಯಂತರ ಭಕ್ತರ ತಾಳ್ಮೆ, ಸಹನೆಯನ್ನು ಪರೀಕ್ಷೆ ಮಾಡಲು ಹೋಗಬಾರದು ಎಂದು ಭಕ್ತರ ಪರವಾಗಿ ಕೋರಿದರು. ನೀವು ಪ್ರಾಮಾಣಿಕರೇ ಆಗಿದ್ದರೆ ಯಾಕೆ ಆ ಸಮೀರ್ ಗೆ ಜಾಮೀನು ಆಗಿದೆ ಎಂದು ಕೈ ಕಟ್ಟಿ ಕುಳಿತಿದ್ದೀರಿ? ನೀವು ನಿಜವಾಗಿಯೂ ಪ್ರಾಮಾಣಿಕರೇ ಆಗಿದ್ದರೆ ಸಮೀರ್‌ನ ಜಾಮೀನು ರದ್ದು ಅರ್ಜಿ ಯಾಕೆ ಸಲ್ಲಿಸಿಲ್ಲ? ಎಂದು ಬಿ ವೈ ವಿಜಯೇಂದ್ರ ಅವರು ಕೇಳಿದರು.

ಅಪಪ್ರಚಾರದ ಕಾರಣದಿಂದ ಶ್ರೀ ಮಂಜುನಾಥ ಸ್ವಾಮಿಯ ಕೋಟ್ಯಂತರ ಭಕ್ತರಿಗೆ ನೋವಾಗುತ್ತಿದೆ. ಮತ್ತೊಂದು ಕಡೆ ರಾಜ್ಯ ಸರಕಾರದ ಎಸ್‍ಐಟಿ ತನಿಖೆ ದಿನೇದಿನೇ ತಡವಾಗುತ್ತಿದೆ. ಇದರ ಪರಿಣಾಮವಾಗಿ ಅಸಂಖ್ಯಾತ ಭಕ್ತರು ನೊಂದಿದ್ದರು. ಇವೆಲ್ಲ ವಿಚಾರಗಳನ್ನು ಇಟ್ಟುಕೊಂಡು ನಾವು ಧರ್ಮಸ್ಥಳ ಚಲೋ ಕರೆ ನೀಡಿದ್ದೆವು. ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಂದ, ಪ್ರತಿ ವಿಧಾನಸಭಾ ಕ್ಷೇತ್ರದಿಂದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಬಂದಿದ್ದರು. ಹಿಂದೂ ಕಾರ್ಯಕರ್ತರು ಬಂದಿದ್ದಾರೆ. ಯಶಸ್ವಿಯಾಗಿ ಕಾರ್ಯಕ್ರಮ ನಡೆದಿದೆ ಎಂದು ವಿವರಿಸಿದರು.

Related Articles

Back to top button