ಯುವಜನ
ಸಿದ್ದಾಪುರ:ಪ್ರೀತಿ ಮಾಡಿದಕ್ಕೆ ಹಲ್ಲೆ ನಡೆಸಿದವರ ಮನೆಯ ಮುಂದೆಯೇ ಇಲಿ ಪಾಷಣ ಸೇವಿಸಿದ ವಿದ್ಯಾರ್ಥಿ ಗಂಭೀರ

Views: 998
ಕನ್ನಡ ಕರಾವಳಿ ಸುದ್ದಿ:ಪ್ರೀತಿಸಿದಕ್ಕೆ ಗಂಭೀರ ಹಲ್ಲೆ ನಡೆಸಿದ್ದ ಪರಿಣಾಮ ವಿದ್ಯಾರ್ಥಿ ಹಲ್ಲೆ ನಡೆಸಿದವರ ಮನೆಯ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಪ್ರೀತಿಯ ವಿಚಾರವಾಗಿ ಕುಂದಾಪುರ ಜೂನಿಯರ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯನ್ನು ಸಿದ್ದಾಪುರಕ್ಕೆ ಕರೆಯಿಸಿ ತಾಯಿ ಎದುರೇ ಗಂಭೀರವಾಗಿ ಹಲ್ಲೆ ನಡೆಸಿದ ಸಿದ್ದಾಪುರ, ಉಳ್ಳೂರು-74 ಗ್ರಾಮದ ಸಂಪಿಗೇಡಿ ಶ್ರವಣ್ ಶೆಟ್ಟಿ ಮತ್ತು ಲೋಕೇಶ್ ಸೇರಿದಂತೆ ಇತರರ ಮೇಲೆ ಶಂಕರನಾರಾಯಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹಲ್ಲೆ ನಡೆಸಿದವರ ಮನೆಯ ಮುಂದೆಯೇ ಇಲಿ ಪಾಷಣ ಸೇವಿಸಿದ ವಿದ್ಯಾರ್ಥಿ ಅಭಿರಾಮ್ ಗಂಭೀರವಾಗಿದ್ದು, ಕಳೆದೆಂಟು ದಿನಗಳಿಂದ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.