ರಾಜಕೀಯ

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ  ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

Views: 326

ಕನ್ನಡ ಕರಾವಳಿ ಸುದ್ದಿ: ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

2022ರಲ್ಲಿ ಕೊಡಗು ಭೂ ಕುಸಿತ ಅವಲೋಕನಕ್ಕೆ ತೆರಳಿದ್ದ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕೊಡಗಿನಲ್ಲಿ ವ್ಯಕ್ತಿಯೋರ್ವ ಮೊಟ್ಟೆ ಎಸೆದಿದ್ದ ಪ್ರಕರಣ ನಡೆದಿತ್ತು. ಆರೋಪಿ ಸಂಪತ್ ಎಂಬಾತ ಬಂಧನಕ್ಕೀಡಾಗಿ ಬಳಿಕ ಬಿಡುಗಡೆಯಾಗಿದ್ದ. ಆದರೆ ಇದೀಗ ಸಂಪತ್ ಶವವಾಗಿ ಪತ್ತೆಯಾಗಿದ್ದಾನೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಲ್ಲಹಳ್ಳಿ ಬಳಿ ರಕ್ತಸಿಕ್ತ ಸ್ಥಿತಿಯಲ್ಲಿ ಸಂಪತ್ ಮೃತದೇಹ ಪತ್ತೆಯಾಗಿದೆ. ಯಾರೋ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆ ಬಳಿಕ ಶವವನ್ನು ಎಸೆದು ಹೋಗಿರುವ ಅನುಮಾನ ವ್ಯಕ್ತವಾಗಿದೆ.

ಕೆಲ ದಿನಗಳ ಹಿಂದೆ ಕುಶಾಲ್ ನಾಪತ್ತೆಯಾಗಿದ್ದಾನೆ ಎಂದು ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈಗ ಸಕಲೇಶಪುರ ಬಳಿ ಶವವಾಗಿ ಪತ್ತೆಯಾಗಿದ್ದಾನೆ.

Related Articles

Back to top button
error: Content is protected !!