ಸಚಿನ್ ತೆಂಡೂಲ್ಕರ್ ಆನ್ಲೈನ್ ಗೇಮಿಂಗ್ ಆಫ್ ವಿರುದ್ಧ ಮನೆ ಮುಂದೆ ಪ್ರತಿಭಟನೆ

Views: 0
ಸಚಿನ್ ತೆಂಡೂಲಸಚಿನ್ ತೆಂಡೂಲ್ಕರ್ ಆನ್ಲೈನ್ ಗೇಮಿಂಗ್ ಆ್ಯಪ್ಗಳ ಬಗ್ಗೆಗಿನ ಜಾಹೀರಾತಿನಲ್ಲಿ ನಟಿಸಿದ್ದಾರೆ.
ಸಚಿನ್ ಅವರ ನಿರ್ಧಾರದಿಂದ ಅಸಮಾಧಾನಗೊಂಡಿರುವ ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರು, ಸಚಿನ್ ನಟಿಸಿರುವ ಜಾಹೀರಾತು ಯುವಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ, ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ದೇವರು ಖ್ಯಾತಿಯ ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರ ಮನೆಯ ಹೊರಗೆ ಪಕ್ಷೇತರ ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರಿಂದ ಪ್ರತಿಭಟನೆ ನಡೆಸಲಾಗಿದೆ. ವಾಸ್ತವವಾಗಿ ಸಚಿನ್ ತೆಂಡೂಲ್ಕರ್ ಆನ್ಲೈನ್ ಗೇಮಿಂಗ್ ಆ್ಯಪ್ ಗಳ ಬಗ್ಗೆಗಿನ ಜಾಹೀರಾತಿನಲ್ಲಿ ನಟಿಸಿದ್ದಾರೆ. ಸಚಿನ್ ಅವರ ನಿರ್ಧಾರದಿಂದ ಅಸಮಾಧಾನಗೊಂಡಿರುವ ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರು, ಸಚಿನ್ ನಟಿಸಿರುವ ಜಾಹೀರಾತು ಯುವಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ, ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ಪಡೆದು, ಸ್ಥಳದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಶಾಸಕರ ಆರೋಪದಲ್ಲಿರುವುದೇನು?
ಭಾರತ ರತ್ನ ಮತ್ತು ಕ್ರಿಕೆಟ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆನ್‌ಲೈನ್ ಆಟಗಳನ್ನು ಪ್ರಚಾರ ಮಾಡಿರುವುದು ಶಾಸಕ ಬಚ್ಚು ಕಡು ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ ಬಚ್ಚು ಕಡು, ‘ಯಾವುದನ್ನು ಜಾಹೀರಾತು ಮಾಡಬೇಕು ಮತ್ತು ಯಾವುದನ್ನು ನೀಡಬಾರದು ಎಂಬುದಕ್ಕೆ ಭಾರತ ರತ್ನ ನೀತಿ ಸಂಹಿತೆ ಹೊಂದಿದೆ. ಹಾಗಾಗಿ ಈಗ ಲಾಯರ್ ಮೂಲಕ ತೆಂಡೂಲ್ಕರ್ಗೆ ನೋಟಿಸ್ ಕಳುಹಿಸುದ್ದೇನೆ. ಸಚಿನ್ ಒಬ್ಬ ಆದರ್ಶ ವ್ಯಕ್ತಿ. ಕೆಲವರಿಗೆ ಅವರು ಕ್ರಿಕೆಟ್ ದೇವರಂತೆ ಬಿಂಬಿತವಾಗಿದ್ದಾರೆ. ಅಲ್ಲದೆ ಸಚಿನ್ ಅವರಿಗೆ ಲಕ್ಷ್ಯಾಂತರ ಫಾಲೋವರ್ಸ್ ಕೂಡ ಇದ್ದಾರೆ. ಹಾಗಾಗಿ ಸಚಿನ್ ಏನಾದರೂ ತಪ್ಪು ಮಾಡಿದ್ದರೆ ಅದು ಯುವ ಪೀಳಿಗೆಯ ಮೇಲೆ ದೊಡ್ಡ ಪರಿಣಾಮ ಬೀರಬಹುದು ಎಂದು ಬಚ್ಚು ಕಡು ಆರೋಪಿಸಿದ್ದಾರೆ.






