ಇತರೆ
ಅಮ್ಮನ ಜೊತೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಲಾರಿ ಹರಿದು ನರಳಿ ನರಳಿ ಪ್ರಾಣಬಿಟ್ಟ ಕಂದಮ್ಮ..
Views: 56
ಕನ್ನಡ ಕರಾವಳಿ ಸುದ್ದಿ: ಲಾರಿ ಹರಿದು ಪುಟ್ಟ ಬಾಲಕಿ ದಾರುಣ ಅಂತ್ಯ ಕಂಡಿರುವ ದುರ್ಘಟನೆ ಬೆಂಗಳೂರು ಉತ್ತರ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತೇಗೌಡನ ಪಾಳ್ಯದಲ್ಲಿ ನಡೆದಿದೆ.
ಅಮ್ಮನ ಜೊತೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಪುಟ್ಟ ಬಾಲಕಿ ಮೇಲೆ ಲಾರಿ ಹರಿದಿದೆ. ಹೆತ್ತ ತಾಯಿ ಕಣ್ಣೆದುರೇ ಪುಟ್ಟ ಕಂದಮ್ಮ ಉಸಿರು ಚೆಲ್ಲಿದೆ. ನಿಶಿಕಾ (4) ಮೃತ ಬಾಲಕಿ. ರಾಜೇಂದ್ರ-ಲಾವಣ್ಯ ದಂಪತಿಯ ಮೊದಲ ಮಗಳಾಗಿದ್ದಳು.
ತಾಯಿ ಮಗಳು ಯುಗಾದಿ ಹಬ್ಬ ಮುಗಿಸಿ ದೇವರ ದರ್ಶನಕ್ಕೆ ತೆರಳುತ್ತಿದ್ದರು. ಲಾವಣ್ಯ ತಮ್ಮ ಎರಡನೇ ಮಗುವನ್ನು ಎತ್ತಿಕೊಂಡು ಮೊದಲ ಮಗುವನ್ನು ಕೈಯಲ್ಲಿ ಹಿಡಿದು ತೆರಳುತ್ತಿದ್ದಾಗ ಅಪಘಾತವಾಗಿದೆ. ಎದುಗೆ ಬರುತ್ತಿದ್ದ ಲಾರಿ ಏಕಾಏಕಿ ಮಗು ಮೇಲೆ ಹರಿದಿದೆ. ತಾಯಿ ಲಾವಣ್ಯ ಕಣ್ಣೆದುರೇ ಲಾರಿ ಹರಿದು ಮಗು ಮೃತಪಟ್ಟಿದ್ದು, ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.






