ಯುವಜನ

ವಿದ್ಯುತ್ ಶಾಕ್ ಹೊಡೆದು ಯುವತಿ ಬಲಿ

Views: 80

ಕನ್ನಡ ಕರಾವಳಿ ಸುದ್ದಿ: ವಿದ್ಯುತ್ ಶಾಕ್ ತಗುಲಿ 24 ವರ್ಷದ ಯುವತಿ ಜೀವ ಕಳೆದುಕೊಂಡ ದಾರುಣ ಘಟನೆ ಹುಬ್ಬಳ್ಳಿ ನಗರದ ಮೂರು ಸಾವಿರ ಮಠದ ಬಳಿ ನಡೆದಿದೆ. ಮೇಘನಾ (24) ಮೃತ ದುರ್ದೈವಿ.

ಘಟನೆಯ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮನೆಗೆ ಹಾಕಿದ್ದ ಮೋಟಾರ್ ಬಂದ್ ಮಾಡಲು ಹೋಗಿದ್ದ ವೇಳೆ ವಿದ್ಯುತ್ ತಗುಲಿ ಮೇಘನಾ ತೀವ್ರ ಅಸ್ವಸ್ಥಗೊಂಡಿದ್ದಾಳೆ. ಕೂಡಲೇ ಮೇಘನಾಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೇಘನಾ ಮೃತಪಟ್ಟಿದ್ದಾಳೆ. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.

Related Articles

Back to top button
error: Content is protected !!