ಕುಂದಾಪುರ: ಹೊಸಂಗಡಿಯಲ್ಲಿ ಸ್ನೇಹಿತನ ಮನೆಗೆ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾದ ಯುವಕ ಶವವಾಗಿ ಪತ್ತೆ!
Views: 265
ಕನ್ನಡ ಕರಾವಳಿ ಸುದ್ದಿ: ಸ್ನೇಹಿತನ ಮನೆಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಯುವಕನೊಬ್ಬ ಮನೆಗೆ ವಾಪಸಾಗದೆ ನಾಪತ್ತೆಯಾಗಿರುವ ಘಟನೆ ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದಲ್ಲಿ ನಡೆದಿದೆ.
ನಾಪತ್ತೆಯಾದ ಯುವಕನನ್ನು ಕವೀನಾ ನಾಯ್ಕ್ (26) ಎಂದು ಗುರುತಿಸಲಾಗಿದೆ. ಹಾಲ್ಕಲ್ ಬಳಿ ಸ್ವಂತ ಟಿಪ್ಪರ್ ಹೊಂದಿದ್ದು, ಕಳೆದ 3–4 ವರ್ಷಗಳಿಂದ ಟಿಪ್ಪರ್ ವ್ಯವಹಾರ ನಡೆಸಿಕೊಂಡು ಬಂದಿದ್ದರು.
ಅ.2ರಂದು ತಾರ್ಕಿಮಕ ಎಂಬಲ್ಲಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಪುನಃ ಮನೆಗೆ ಬಾರದೆ ಕಾಣೆಯಾಗಿದ್ದು, ಮನೆಯವರು ಹುಡುಕುತ್ತ ಸಾಗಿದಾಗ ಹೊಸಂಗಡಿಯ ಮಾತಿನಮಠ ಎಂಬಲ್ಲಿ ಶೇಖರ ನಾಯ್ಕ ಅವರ ಮನೆಯ ತೋಟದ ಬಳಿ ಶವ ಅ.5ರಂದು ಪತ್ತೆಯಾಗಿದೆ.
ಶವವು ಅಂಗಾತ ಸ್ಥಿತಿಯಲ್ಲಿ ಬಿದ್ದಿದ್ದು, ಕೊಳೆತ ಸ್ಥಿತಿಯಲ್ಲಿ ಇತ್ತು. ಶವ ದೊರೆತ ಸ್ಥಳವು ಮೆನೆಗೆ ಹೋಗುವ ದಾರಿ ಅಲ್ಲದೆ ಇದ್ದು ಮತ್ತು ಶವದ ಕಾಲಿನಲ್ಲಿ ಚಪ್ಪಲಿ ಇರದೆ ಇರುವುದು ಕವೀನಾ ಅವರ ಸಾವಿನಲ್ಲಿ ಸಂಶಯ ಇರುವುದಾಗಿ ಸಹೋದರ ಪ್ರವೀಣ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣೆ ದಾಖಲಾಗಿದೆ






