ಇತರೆ

ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ವೇಳೆ ಉಸಿರುಗಟ್ಟಿ ನಾಲ್ವರು ವಿದ್ಯಾರ್ಥಿಗಳು ಸಾವು

Views: 103

ಕನ್ನಡ ಕರಾವಳಿ ಸುದ್ದಿ: ಸಂಸ್ಕೃತ ವಸತಿ ಗುರುಕುಲದ ಆವರಣದಲ್ಲಿದ್ದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ವೇಳೆ ಉಸಿರುಗಟ್ಟಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಮಥುರಾ ನಗರದ ವೃಂದಾವನದಲ್ಲಿ ಈ ದುರಂತ ಸಂಭವಿಸಿದೆ. ಇಲ್ಲಿನ ಚೈತನ್ಯ ವಿಹಾರದಲ್ಲಿರುವ ಮಹರ್ಷಿ ಪಾಣಿನಿ ಸಂಸ್ಕೃತ ವಸತಿ ಗುರುಕುಲದ ಆವರಣದಲ್ಲಿದ್ದ 12 ಅಡಿ ಆಳದ ಅಂಡರ್‌ಗ್ರೌಂಡ್ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಐವರು ವಿದ್ಯಾರ್ಥಿಗಳು ಇಳಿದಿದ್ದರು.

ಟ್ಯಾಂಕ್ ಒಳಗೆ ಇಳಿಯುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಉಸಿರುಗಟ್ಟಿದ್ದು, ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ. ಮೃತರನ್ನು ಕಟಾರೆ (22), ವಿಷು ಶರ್ಮಾ (19), ಆರ್ಯನ್ ಪಾಂಡೆ (16) ಮತ್ತು ದೇವಂಶ್ ಶರ್ಮಾ (17) ಎಂದು ಗುರುತಿಸಲಾಗಿದೆ.

ಟ್ಯಾಂಕ್‌ಗೆ ಇಳಿದಿದ್ದ ಐವರ ಪೈಕಿ ರುದ್ರಾಕ್ಷ್ ಎಂಬ ಮತ್ತೊಬ್ಬ ವಿದ್ಯಾರ್ಥಿಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Related Articles

Back to top button
error: Content is protected !!