ವರದಕ್ಷಿಣೆ ದಾಹಕ್ಕೆ ದುರಂತ ಅಂತ್ಯ ಕಂಡ ಹೆಂಡತಿ:ಗಂಡ, ಅತ್ತೆ ವಿರುದ್ಧ ಪ್ರಕರಣ ದಾಖಲು
Views: 62
ಕನ್ನಡ ಕರಾವಳಿ ಸುದ್ದಿ: ವರದಕ್ಷಿಣೆ ದಾಹದಿಂದ ನವವಿವಾಹಿತೆಯನ್ನು ಸುಟ್ಟು ನಾಲೆಗೆ ಬಿಸಾಡಿದ ಅಮಾನವೀಯ ಘಟನೆ ಕೇರಳ ರಾಜ್ಯದ ತ್ರಿಶೂರಿನಲ್ಲಿ ಬೆಳಕಿಗೆ ಬಂದಿದೆ.
ಮೃತಳನ್ನು ಅರ್ಚನಾ (20) ಎಂದು ಗುರುತಿಸಲಾಗಿದೆ.
ಆರು ತಿಂಗಳ ಹಿಂದೆಯಷ್ಟೇ ಶರೋನ್ ಎಂಬವನನ್ನು ಅರ್ಚನಾ ಪ್ರೇಮ ವಿವಾಹವಾಗಿದ್ದರು.ವರದಕ್ಷಿಣೆ ಕಿರುಕುಳದಿಂದಾಗಿ 20 ವರ್ಷದ ಅರ್ಚನಾ ದಾರುಣ ಅಂತ್ಯ ಕಂಡಿದ್ದಾಳೆ. ಈ ಘಟನೆಯಲ್ಲಿ ಅರ್ಚನಾಳ ಗಂಡ ಮತ್ತು ಆತನ ತಾಯಿಯ ವಿರುದ್ಧ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ.
ಮದುವೆಯ ನಂತರ, ವರದಕ್ಷಿಣೆ ನೀಡಲಿಲ್ಲ ಎಂಬ ಕಾರಣಕ್ಕೆ ಗಂಡ ಮತ್ತು ಆತನ ಕುಟುಂಬದವರು ಅರ್ಚನಾ ಅವರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ಮದುವೆಯಾದಾಗಿನಿಂದ, ಆಕೆಯನ್ನು ಮನೆಯವರೊಂದಿಗೆ ಮಾತನಾಡಲು ಅಥವಾ ಸಂಪರ್ಕಿಸಲು ಸಹ ಬಿಡುತ್ತಿರಲಿಲ್ಲ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.
ಶರೋನ್ ಮನೆಯ ಹಿಂಭಾಗದ ನಾಲೆಯಲ್ಲಿ ಅರ್ಚನಾಳ ಶವ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಾಜ್ಯ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.






