ಲ್ಯಾಬ್ ಗೆಂದು ಹೋದ ಪ್ಯಾರಾ ಮೆಡಿಕಲ್ ಮುಗಿಸಿದ ವಿದ್ಯಾರ್ಥಿನಿ ಶವವಾಗಿ ಪತ್ತೆ!
Views: 85
ಕನ್ನಡ ಕರಾವಳಿ ಸುದ್ದಿ: ಸಂಜೆ ಮನೆಯಿಂದ ಲ್ಯಾಬ್ ಗೆಂದು ಹೋದ ಯುವತಿಯ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಬೆಳಿಗ್ಗೆ ರಸ್ತೆ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ಘಟನೆ ಧಾರವಾಡದ ಮನಸೂರು ಎಂಬಲ್ಲಿ ನಡೆದಿದೆ.
ಧಾರವಾಡದ ಗಾಂಧಿ ಚೌಕ್ ನಿವಾಸಿ ಯೂನುಸ್ ಮುಲ್ಲಾ ಎಂಬವರ ಪುತ್ರಿ ಝಕಿಯಾ ಮುಲ್ಲಾ (21) ಕೊಲೆಯಾದ ಯುವತಿ.

ಪ್ಯಾರಾ ಮೆಡಿಕಲ್ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದ ಝಕಿಯಾ ಮಂಗಳವಾರ ಸಂಜೆ ಮನೆಯಿಂದ ಲ್ಯಾಬ್ ಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆಮಂದಿ ರಾತ್ರಿಯಿಡೀ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.ಮುಂಜಾನೆ ಹುಡುಕಾಡಿದಾಗ ಧಾರವಾಡದ ಮನಸೂರು ರಸ್ತೆಯ ಸಮೀಪ ಝಕಿಯಾ ಅವರ ಮೃತದೇಹ ಪತ್ತೆಯಾಗಿದೆ.
ಬೇರೆ ಯಾವುದೋ ಸ್ಥಳದಲ್ಲಿ ಅವರನ್ನು ಕೊಲೆ ಮಾಡಿ, ಈ ಸ್ಥಳಕ್ಕೆ ತಂದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.






