ಸಾಂಸ್ಕೃತಿಕ

ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಸಿನಿಮಾ ಮಾಡಲು ಹೊರಟರೆ, ಪ್ರತಿಭಟನೆ ಎಚ್ಚರಿಕೆ ನೀಡಿದ ವಾಟಾಳ್! 

Views: 72

ಕನ್ನಡ ಕರಾವಳಿ ಸುದ್ದಿ: ಬೆಳಗಾವಿಯಲ್ಲಿ ಮರಾಠಿ ಪುಂಡರ ದಬ್ಬಾಳಿಕೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

ಕನ್ನಡ ಚಿತ್ರನಟರು ಛತ್ರಪತಿ ಶಿವಾಜಿ ಸಿನಿಮಾ ಮಾಡಿದರೆ ಕರ್ನಾಟಕದಲ್ಲಿ ಬಹಿಷ್ಕರಿಸುತ್ತೇವೆ. ಕನ್ನಡಿಗರ ಮೇಲಿನ ದೌರ್ಜನ್ಯವನ್ನು ಸಹಿಸಿಕೊಂಡಿರಬೇಕಾ ಎಂದ ವಾಟಾಳ್ ನಾಗರಾಜ್ ಈ ಮೂಲಕ ಪರೋಕ್ಷವಾಗಿ ಛತ್ರಪತಿ ಶಿವಾಜಿ ಸಿನಿಮಾ ಮಾಡಲು ಸಿದ್ಧರಾಗಿರುವ ನಟ ರಿಷಬ್ ಶೆಟ್ಟಿಗೆ ಎಚ್ಚರಿಕೆ ನೀಡಿದ್ದಾರೆ.

ನಿರ್ದೇಶಕ ಸಂದೀಪ್‌ ಸಿಂಗ್‌ ಅವರ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಲಿದ್ದಾರೆ. ಖಡ್ಗ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ್ ಲುಕ್‌ನಲ್ಲಿ ರಿಷಬ್‌ ಶೆಟ್ಟಿ ಕಾಣಿಸಿಕೊಂಡಿರುವ ಪೋಸ್ಟರ್‌ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಿನಿಮಾ ಘೋಷಣೆ ಮಾಡಿದ ದಿನದಿಂದ ರಿಷಬ್‌ ಶೆಟ್ಟಿ ಈ ಪಾತ್ರದಲ್ಲಿ ನಟಿಸುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದು, ಕನ್ನಡದ ನಟ ರಿಷಬ್‌ ಶೆಟ್ಟಿ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.

ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾದಲ್ಲಿ ನಟಿಸುತ್ತಿರುವ ರಿಷಬ್ ಶೆಟ್ಟಿ ವಿರುದ್ಧ ವಾಟಾಳ್ ನಾಗರಾಜ್ ಗರಂ ಆಗಿದ್ದಷ್ಟೇ ಅಲ್ಲ, ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಆದರೆ, ಮರಾಠಿಗರ ಪುಂಡಾಟಕ್ಕೆ ರಿಷಬ್ ಶೆಟ್ಟಿ ಪೇಚಿಗೆ ಸಿಲುಕುವಂತಾಗಿದೆ.

Related Articles

Back to top button
error: Content is protected !!