ರಹಸ್ಯ ಮದುವೆ ಬ್ರೇಕಪ್: ಆತ್ಮಹತ್ಯೆಗೆ ಶರಣಾದ ಯುವತಿ

Views: 108
ಕನ್ನಡ ಕರಾವಳಿ ಸುದ್ದಿ: ಸೋದರ ಸಂಬಂಧಿ ಜೊತೆ ರಹಸ್ಯವಾಗಿ ಮದುವೆಯಾಗಿದ್ದ 18 ವರ್ಷದ ಹುಡುಗಿಯೊಬ್ಬಳು, ಮನೆಯವರು ಯಾರು ಮನೆಯಲ್ಲಿಲ್ಲದ ವೇಳೆ ಸಾವಿಗೆ ಶರಣಾದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.
ಪ್ರೀತಿ ಕುಶ್ವಾಹ್ ಸಾವಿಗೆ ಶರಣಾದ ಯುವತಿ. ತನ್ನ ಅಣ್ಣ ಹಾಗೂ ಅಕ್ಕ ಪೋಷಕರು ಹೊರಗಡೆ ಹೋಗಿದ್ದ ವೇಳೆ ಪ್ರೀತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಹೊರಗಡೆ ಹೋಗಿದ್ದ ಪ್ರೀತಿಯ ತಾಯಿಗೆ ಪ್ರೀತಿ ಸಂಜೆ ವೇಳೆ ಕರೆ ಮಾಡಿದ್ದು, ನಿನಗಾಗಿ ತಾನು ಚಪಾತಿ ಮಾಡಿದ್ದೇನೆ ಮನೆಗೆ ಬಂದ ಮೇಲೆ ಅದನ್ನು ತಿನ್ನುವಂತೆ ಹೇಳಿದ್ದಾಳೆ. ಆದರೆ ಮರಳಿ ಮನೆಗೆ ಬಂದ ತಮಗೆ ಪ್ರೀತಿಯ ಮೃತದೇಹ ನೋಡಲು ಸಿಗಬಹುದು ಎಂದು ಅವರು ಊಹೆಯೂ ಮಾಡಿರಲಿಲ್ಲ, ಮಗಳ ಸಾವಿನ ನಂತರ ಆಕೆಯ ರಹಸ್ಯ ಮದುವೆಯ ಬಗ್ಗೆ ಪೋಷಕರಿಗೆ ತಿಳಿದಿದ್ದು, ದೂರದ ಸಂಬಂಧಿಯ ಮೇಲೆ ಆರೋಪ ಮಾಡಿದ್ದಾರೆ.
ನೇಣಿಗೆ ಶರಣಾದ ಪ್ರೀತಿ ದೆಹಲಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಎರಡು ವರ್ಷದ ಹಿಂದೆ ಪ್ರೀತಿ ಕುಶ್ವಾಹ್ ಕುಟುಂಬವೂ ಅವರ ಕುಟುಂಬವೂ ಅವರ ಊರಿಗೆ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ಹೋಗಿದ್ದರು. ಅಲ್ಲಿ ಪ್ರೀತಿಗೆ ದೂರದ ಸಂಬಂಧಿ ಹುಡುಗನೋರ್ವನ ಪರಿಚಯವಾಗಿತ್ತು. ಕ್ರಮೇಣ ಇಬ್ಬರ ನಡುವಿನ ಒಡನಾಟ ತೀವ್ರವಾಗಿದ್ದು, ಇಬ್ಬರೂ ರಹಸ್ಯವಾಗಿ ಮದುವೆಯನ್ನು ಆಗಿದ್ದರು.






