ರಾಜಕೀಯ

ಯಾರಾಗುತ್ತಾರೆ ಮುಂದಿನ ಉಪರಾಷ್ಟ್ರಪತಿ? ಇಂದು ಚುನಾವಣೆ 

Views: 48

ಕನ್ನಡ ಕರಾವಳಿ ಸುದ್ದಿ: ದೇಶದ ಉಪರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ ನಡೆಯಲಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ.ರಾಧಾಕೃಷ್ಣನ್‌ ಐಎನ್‌ಡಿಐಎ ಅಭ್ಯರ್ಥಿಯಾಗಿ ನಿವೃತ್ತ ನ್ಯಾ.ಬಿ.ಸುದರ್ಶನ ರೆಡ್ಡಿ ಕಣದಲ್ಲಿದ್ದಾರೆ.

ಸಂಖ್ಯಾಬಲ ಗಮನಿಸಿದರೆ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್‌ ಗೆಲುವು ಬಹುತೇಕ ಖಚಿತವಾಗಿದೆ. ಸಂಸತ್‌ ಭವನದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಸಂಜೆ 6 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ರಾತ್ರಿ ವೇಳೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್‌ನ ಉಭಯ ಸದನಗಳ (ರಾಜ್ಯಸಭೆ-238, ಲೋಕಸಭೆ-542) 781 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಅಭ್ಯರ್ಥಿಯೊಬ್ಬರ ಗೆಲುವಿಗೆ 391 ಮತಗಳ ಅಗತ್ಯವಿದೆ.

ವೈಎಸ್‌ಆರ್‌ ಕಾಂಗ್ರೆಸ್‌ನ 11 ಸಂಸದರ ಬೆಂಬಲದೊಂದಿಗೆ ಎನ್‌ಡಿಎ 436 ಸದಸ್ಯರ ಬಲ ಹೊಂದಿದೆ. ಪ್ರತಿಪಕ್ಷಗಳ ಐಎನ್‌ಡಿಐಎ 324 ಸಂಸದರನ್ನೊಂದಿದೆ. ಪ್ರತಿಪಕ್ಷಗಳಿಗಿಂತ ಆಡಳಿತಾರೂಢ ಎನ್‌ಡಿಎ 110 ರಿಂದ 125 ಮತಗಳ ಮುನ್ನಡೆಯಲ್ಲಿದೆ.

ಉಪರಾಷ್ಟ್ರಪತಿ ಆಯ್ಕೆಗೆ ಎರಡೂ ಸದನಗಳ ಸಂಯೋಜಿತ ಬಲವು 781 ಆಗಿದ್ದು, ಗೆಲುವಿಗೆ 394 ಮತಗಳನ್ನು ಗಳಿಸಬೇಕಿದೆ. ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್‌ ಮತ್ತು ಇಂಡಿಯಾ ಒಕ್ಕೂಟದ ಅಭ್ಯರ್ಥಿ ಬಿ. ಸುದರ್ಶನ್‌ ರೆಡ್ಡಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

 

Related Articles

Back to top button