ಯಕ್ಷಗಾನ ಮೇಳದ ಚೌಕಿಯಲ್ಲಿಯೇ ಸಹ ಕಲಾವಿದನ ಮೇಲೆ ಹಲ್ಲೆ

Views: 539
ಬೈಂದೂರಿನ ಎಲ್ಲೂರು ಸಮೀಪ ಮಾರಣಕಟ್ಟೆಯ ಮೇಳದವರಿಂದ ಕ್ಷೇತ್ರ ಮಹಾತ್ಮೆ ಪ್ರದರ್ಶನ ನಡೆದಿತ್ತು. ಪ್ರಸಂಗದಲ್ಲಿ ನಂದಿ ವೇಷ ಮಾಡುವಂತೆ ಸಹ ಕಲಾವಿದ ಪ್ರದೀಪ್ ಆಲೂರು ಎಂಬಾತನಿಗೆ ಹಿರಿಯ ಸ್ತ್ರೀ ವೇಷದ ಕಲಾವಿದ ಪ್ರದೀಪ್ ಶೆಟ್ಟಿ ನಾರ್ಕಳಿ ಎಂಬಾತ ಹೇಳಿದ್ದ. ಆದರೆ ಅದಕ್ಕೆ ಪ್ರದೀಪ್ ಆಲೂರು ಒಪ್ಪಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಪ್ರದೀಪ್ ಶೆಟ್ಟಿ, ಚೌಕಿಯಲ್ಲಿಯೇ ಆರೋಪಿ ಪ್ರದೀಪ್ ಆಲೂರು ಎಂಬಾತನ ಕುತ್ತಿಗೆ ಹಿಡಿದು ಬಗ್ಗಿಸಿ ಬೆನ್ನಿಗೆ ಹಿಗ್ಗಾಮುಗ್ಗ ಹೊಡೆದಿದ್ದಾನೆ.
ಆರೋಪಿ ಪ್ರದೀಪ್ ಶೆಟ್ಟಿ ನಾರ್ಕಳಿ
ಅಲ್ಲಿಯೇ ಇದ್ದ ಕಲಾವಿದರೊಬ್ಬರು ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿದು ಬಿಟ್ಟಿದ್ದು, ಹಲ್ಲೆ ಮಾಡಿದ ಆರೋಪಿ ಪ್ರದೀಪ್ ಶೆಟ್ಟಿ ಮೇಲೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆಯೂ ಹಲವಾರು ಕಲಾವಿದರಿಗೆ ಹಲ್ಲೆ ನಡೆಸಿ ದರ್ಪ ತೋರಿದ್ದಾನೆ.ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆ ಮಾಡಿದ ಪ್ರದೀಪ್ ಶೆಟ್ಟಿಗೆ ಶಿಕ್ಷೆಯಾಗಬೇಕು. ಆತನನ್ನು ಮೇಳದಿಂದ ಕೈ ಬಿಡಬೇಕು ಎಂದು ಸಾಮಾಜಿಕ ಜಾಲಾತಾಣದಲ್ಲಿ ಯಕ್ಷಗಾನ ಅಭಿಮಾನಿಗಳು ಆಗ್ರಹಿಸಿದ್ದಾರೆ.