ರಾಜಕೀಯ

ಮೋದಿ ಭೇಟಿ ವೇಳೆ ಸ್ಫೋಟ ಬೆದರಿಕೆ: ಜಿಲೆಟಿನ್ ಕಡ್ಡಿಗಳು ಪತ್ತೆ, ವ್ಯಕ್ತಿಯ ಬಂಧನ

Views: 88

ಕನ್ನಡ ಕರಾವಳಿ ಸುದ್ದಿ:  ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾನುವಾರ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದ ವೇಳೆ ಆತಂಕಕಾರಿ ಕ್ಷಣಗಳು ನಿರ್ಮಾಣವಾಗಿದ್ದವು. ಮೋದಿ ಭಾಗವ ಹಿಸುವ ಎರಡೂ ಜಾಗಗಳಲ್ಲಿ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಿದ್ದ ಲೋಹಿತ್ ಎಂಬ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಇನ್ನು ರವಿಶಂಕರ್ ಗುರೂಜಿ ಆಶ್ರಮ ದಿಂದ 3 ಕಿ.ಮೀ. ದೂರವಿರುವ ಕಗ್ಗಲೀ ಪುರ ಬಳಿಯ ತಾತಗುಣಿ ರಸ್ತೆಯ ಕಾಂಪೌಂಡ್ ಬಳಿ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಕಲ್ಲು ಕ್ವಾರಿ ಗಳಿಗೆ ಬಳಸುವ ಈ ಜಿಲೆಟಿನ್ ಕಡ್ಡಿಗಳು ಜೀವಂತ ಸ್ಥಿತಿಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ. ಇದರ ಹಿನ್ನೆಲೆಯನ್ನು ಪತ್ತೆ ಮಾಡಲು ತನಿಖಾ ತಂಡ ರಚನೆಯಾಗಿದೆ. ಸ್ಪೋಟದ ಬೆದರಿಕೆ ಹಾಕಿದ್ದ ಲೋಹಿತ್‌ಗೆ ಜಿಲೆಟಿನ್‌ ಕಡ್ಡಿ ಪತ್ತೆಗೂ ಸಂಬಂಧ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಮಾನಸಿಕ ಅಸ್ವಸ್ಥ?: ಸ್ಫೋಟದ ಬೆದರಿಕೆ ಹಾಕಿದ್ದ ವ್ಯಕ್ತಿ ತನಿಖೆ ವೇಳೆ ಮಾನಸಿಕ ಅಸ್ವಸ್ಥನಂತೆ ವರ್ತಿಸಿದ್ದಾನೆ. ಪ್ರಧಾನಿ ಮೋದಿ ಭಾಗಿಯಾಗಲಿರುವ ಎರಡೂ ಕಾರ್ಯಕ್ರಮ ಗಳಲ್ಲಿ ಸ್ಪೋಟ ಮಾಡುವುದಾಗಿ ಬೆಳಗ್ಗೆ 7 ಗಂಟೆಯ ಹೊತ್ತಿಗೆ ಕೋರಮಂಗಲ ಪೊಲೀಸರಿಗೆ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಕೂಡಲೇ ಜಾಗೃತಗೊಂಡ ಪೊಲೀಸರು 7.30ರ ವೇಳೆಗೆ ಲೋಹಿತ್ ಎಂಬಾತನನ್ನು ಬನ್ನೇರುಘಟ್ಟ ರಸ್ತೆಯ ಮಸೀದಿ ಬಳಿಯಲ್ಲಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಈತ ಮಾನಸಿಕ ಅಸ್ವಸ್ಥ ನಂತೆ ವರ್ತನೆ ಮಾಡಿದ್ದು, ಈ ಹಿಂದೆ ದೇಶದ ಗಣ್ಯ ವ್ಯಕ್ತಿಗಳು ಆಗಮಿಸಿದಾಗಲೂ ಇದೇ ರೀತಿಯ ಬೆದರಿಕೆ ಕರೆ ಮಾಡಿದ್ದ. ಖುದ್ದು ವಿಚಾರಣೆ ನಡೆಸಿರುವ ಆಗ್ನೆಯ ವಿಭಾಗ ಡಿಸಿಪಿ ಮಹಮ್ಮದ್ ಸುಜೀತಾ, ಮೇಲ್ನೋಟಕ್ಕೆ ಈತನಿಗೆ ಬೇರೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Related Articles

Back to top button
error: Content is protected !!