ಆರೋಗ್ಯ

ಮಾ.2 ರಂದು ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ( ರಿ.) ಮಂಗಳೂರು: ಯುವ ವೇದಿಕೆ,16 ದೇವಸ್ಥಾನದ ವಲಯ ವೇದಿಕೆ ಸಹಭಾಗಿತ್ವದಲ್ಲಿ ಬೃಹತ್‌ ರಕ್ತದಾನ ಶಿಬಿರ

Views: 150

ಕನ್ನಡ ಕರಾವಳಿ ಸುದ್ದಿ: ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ( ರಿ.) ಮಂಗಳೂರು ಇದರ ಯುವ ವೇದಿಕೆ ನೇತೃತ್ವದಲ್ಲಿ ಹಾಗೂ 16 ದೇವಸ್ಥಾನದ ವಲಯ ವೇದಿಕೆ ಸಹಭಾಗಿತ್ವದಲ್ಲಿ ಬೃಹತ್‌ ರಕ್ತದಾನ ಶಿಬಿರ ಮಾ.2 ರಂದು ರವಿವಾರ ಬೆಳಗ್ಗೆ 9:30ಕ್ಕೆ ಬಪ್ಪನಾಡು ಬಳಿಯ ದೇವಾಡಿಗ ಸಂಘದಲ್ಲಿ ನಡೆಯಲಿದೆ.

ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ ಹಾಗೂ ವಿಧ್ಯಾವರ್ದಕ ಸಂಘದ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರಿಗೆ, 16 ದೇವಸ್ಥಾನ ಮತ್ತು ಎಲ್ಲಾ ದೇವಸ್ಥಾನದ ವಲಯ ವೇದಿಕೆಗೆ ಸರ್ವರಿಗೂ ಪ್ರೀತಿಯ ಆಹ್ವಾನ

ಏನಿದು ರಕ್ತದಾನ?

play-sharp-fill
18 ರಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ, ದೇಹದ ತೂಕ ಕನಿಷ್ಠ 45 ಕೆ.ಜಿ. ಇರುವವರು 350 ಎಂಎಲ್ ಹಾಗೂ 55 ಕೆ.ಜಿ.ಗಿಂತ ಅಧಿಕ ತೂಕ ಇರುವವರು 450 ಎಂಎಲ್‌ ರಕ್ತದಾನ ಮಾಡಬಹುದು.

ರಕ್ತದಾನ ಮಾಡಿದ ವ್ಯಕ್ತಿಯ ದೇಹದಲ್ಲಿ 48 ಗಂಟೆಗಳೊಳಗೆ ಅಷ್ಟೇ ಪ್ರಮಾಣದ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಇದರಿಂದ ಉತ್ತಮ ಆರೋಗ್ಯ ಹೊಂದಬಹುದು. ಜ್ಞಾಪಕಶಕ್ತಿಯೂ ಹೆಚ್ಚುತ್ತದೆ, ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡ ಹಾಗೂ ಮಧುಮೇಹ ತಡೆಯಲು ಸಹಕಾರಿಯಾಗುತ್ತದೆ. ಹೀಗಾಗಿ ಯಾವುದೇ ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಆಸಕ್ತರು ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡಬಹುದಾಗಿದೆ.

ರಕ್ತದಾನ ಮಾಡಿದ ವ್ಯಕ್ತಿಯ ದೇಹದಲ್ಲಿ 48 ಗಂಟೆಗಳೊಳಗೆ ಅಷ್ಟೇ ಪ್ರಮಾಣದ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಇದರಿಂದ ಉತ್ತಮ ಆರೋಗ್ಯ ಹೊಂದಬಹುದು. ಜ್ಞಾಪಕಶಕ್ತಿಯೂ ಹೆಚ್ಚುತ್ತದೆ, ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡ ಹಾಗೂ ಮಧುಮೇಹ ತಡೆಯಲು ಸಹಕಾರಿಯಾಗುತ್ತದೆ. ಆಸಕ್ತರು ರಕ್ತದಾನ ಶಿಬಿರಗಳಲ್ಲಿ ಇಲ್ಲವೆ ರಕ್ತ ನಿಧಿ ಘಟಕಗಳಲ್ಲಿ ರಕ್ತದಾನ ಮಾಡಬಹುದಾಗಿದೆ.

ಸಮಾಜ ಪ್ರತಿಯೊಂದು ಜೀವಕ್ಕೆ ಜೀವ ನೀಡುವ ಮಹಾದಾನವೇ ರಕ್ತದಾನ. ಈವೊಂದು ಮಹತ್ಕಾರ್ಯದಲ್ಲಿ  ಪಾಲ್ಗೊಳ್ಳುವಂತೆ  ಯುವ ವೇದಿಕೆ ಸಂಚಾಲಕರಾದ ಹರೀಶ್ ಮುಲ್ಕಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button