ಮೊಬೈಲ್ ಗೇಮ್ ಆಡದಂತೆ ಪೋಷಕರು ಬೈದಿದಕ್ಕೆ ಮೂವರು ಸಹೋದರಿಯರು 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ
Views: 90
ಕನ್ನಡ ಕರಾವಳಿ ಸುದ್ದಿ: ಮೊಬೈಲ್ ಗೇಮ್ ಆಡದಂತೆ ಪೋಷಕರು ಬೈದರೆಂಬ ಕಾರಣಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಒಂಬತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ಭೀಕರ ಘಟನೆ ಸಂಭವಿಸಿದೆ.
ಮೃತರನ್ನು ವಿಶಿಕಾ (16), ಪ್ರಾಚಿ (14) ಮತ್ತು ಪಖಿ (12) ಎಂದು ಗುರುತಿಸಲಾಗಿದೆ. ಬುಧವಾರ ನಸುಕಿನ ಜಾವ 2 ಗಂಟೆಯ ಸುಮಾರಿಗೆ ಭಾರತ್ ಸಿಟಿಯ ಅಪಾರ್ಟ್‌ಮೆಂಟ್ ಕಟ್ಟಡದಿಂದ ಕೆಳಕ್ಕೆ ಹಾರಿ ಈ ಮೂವರೂ ಪ್ರಾಣ ಬಿಟ್ಟಿದ್ದಾರೆ.
ವರದಿಗಳ ಪ್ರಕಾರ, ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್ ಕ್ಲಾಸ್‌ಗಳಿಗಾಗಿ ಮೊಬೈಲ್ ನೀಡಲಾಗಿತ್ತು. ಆದರೆ ಇದು ಕ್ರಮೇಣ ವ್ಯಸನವಾಗಿ ಬದಲಾಯಿತು. ಇತ್ತೀಚಿನ ದಿನಗಳಲ್ಲಿ ಇವರು ‘ಕೊರಿಯನ್ ಲವ್ ಗೇಮ್’ ಎನ್ನುವ ಟಾಸ್ಕ್ ಆಧಾರಿತ ಆನ್‌ಲೈನ್ ಗೇಮ್‌ಗೆ ದಾಸರಾಗಿದ್ದರು. ಗೇಮಿಂಗ್ ಹುಚ್ಚಿನಿಂದಾಗಿ ಇವರು ಸರಿಯಾಗಿ ಶಾಲೆಗೂ ಹೋಗುತ್ತಿರಲಿಲ್ಲ.
ಈ ಸಹೋದರಿಯರು ಎಷ್ಟು ಅನ್ನೋನ್ಯವಾಗಿದ್ದರೆಂದರೆ ಊಟ, ಸ್ನಾನ, ನಿದ್ದೆ ಎಲ್ಲವನ್ನೂ ಒಟ್ಟಿಗೆ ಮಾಡುತ್ತಿದ್ದರು.
ದುರದೃಷ್ಟವಶಾತ್ ಸಾವು ಕೂಡ ಇವರನ್ನು ಒಟ್ಟಿಗೇ ಆವರಿಸಿದೆ. ಪೋಷಕರು ಗೇಮ್ ಆಡದಂತೆ ಮಿತ ಹೇರಲು ಪ್ರಯತ್ನಿಸಿದಾಗ, ಅದರಿಂದ ಮನನೊಂದು ಈ ತೀವ್ರ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.






