ಶಿಕ್ಷಣ

ಕುಂದಾಪುರ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಆಚರಣೆ

ಯಾವುದನ್ನು ಮದ್ದುಗುಂಡುಗಳಿಂದ ಸಾಧಿಸಲು ಸಾಧ್ಯವಿಲ್ಲವೋ, ಅದನ್ನು ಶಾಂತಿ ಮತ್ತು ಅಹಿಂಸೆಗಳೆಂಬ ಉಪ ಮಾರ್ಗಗಳಿಂದ ಕಾರ್ಯರೂಪಕ್ಕೆ ತರುವುದು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ----ಪ್ರೊ.ಚೆನ್ನ ಪೂಜಾರಿ

Views: 3

ಕನ್ನಡ ಕರಾವಳಿ ಸುದ್ದಿ: “ಯಾವುದನ್ನು ಮದ್ದುಗುಂಡುಗಳಿಂದ ಸಾಧಿಸಲು ಸಾಧ್ಯವಿಲ್ಲವೋ, ಅದನ್ನು ಶಾಂತಿ ಮತ್ತು ಅಹಿಂಸೆಗಳೆಂಬ ಉಪ ಮಾರ್ಗಗಳಿಂದ ಕಾರ್ಯರೂಪಕ್ಕೆ ತರುವುದು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು ಗಾಂಧೀಜಿಯವರು.ಲಾಲ್ ಬಹದ್ದೂರ್ ಶಾಸ್ತ್ರೀಜಿ ಮತ್ತು ಗಾಂಧೀಜಿ ಇಬ್ಬರೂ ಮೌಲ್ಯಗಳ ಮೇಲೆ ನಮ್ಮ ದೇಶ ನಡೆಯಬೇಕೆಂಬ ಅಚಲ ನಂಬಿಕೆಯಿಂದ ಹೋರಾಟ ನಡೆಸಿದವರು” ಎಂದು ಕುಂದಾಪುರದ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿಯಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೂಲ್ಕಿ ವಿಜಯಾ ಕಾಲೇಜಿನ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ.ಚೆನ್ನ ಪೂಜಾರಿಯವರು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನವೀನ ಕುಮಾರ್ ಶೆಟ್ಟಿಯವರು ಅಧ್ಯಕ್ಷೀಯ ಭಾಷಣದಲ್ಲಿ ‘ವಿಜಿಲೆಂಟ್ ಸಿಟಿಝನ್ಸ್ ಅಥವಾ ಜಾಗರೂಕ ಪ್ರಜೆಗಳಾದ ನಾವು ರಾಷ್ಟ್ರೀಯ ವಿಚಾರಗಳ ಬಗ್ಗೆ ಇತಿಹಾಸಕಾರರು ತಿರುಚಿದ ವಿಷಯಗಳಿಗೆ ಗಮನ ಕೊಡದೇ, ನೈಜ ಸಂಗತಿಗಳ ಅವಲೋಕನ ಮಾಡಬೇಕು’ ಎಂದು ಕರೆ ನೀಡಿದರು.

ಕಾಲೇಜಿ‌ನ ಅರ್ಥಶಾಸ್ತ್ರ ಉಪನ್ಯಾಸಕಿ ನಾಗರತ್ನಾರವರು ಇಬ್ಬರು ರಾಷ್ಟ್ರ ನಾಯಕರ ಜನ್ಮ ದಿನಗಳನ್ನು ಆಚರಿಸುವ ಔಚಿತ್ಯದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈಯವರು ಗಾಂಧೀಜಿಯವರ ಬಗ್ಗೆ ಸ್ವರಚಿತ ಕವಿತಾ ವಾಚನಗೈದರು. ಗಾಂಧೀಜಿ ಮತ್ತು ಶಾಸ್ತ್ರೀಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿ.ಬಿ ಯವರು ಕಾರ್ಯಕ್ರಮ ನಿರ್ವಹಿಸಿದರು.

 

Related Articles

Back to top button
error: Content is protected !!