ಇತರೆ
ಮದುವೆ ಜಾತಕ ತೋರಿಸಲು ಹೋದಾಗ ಅರ್ಚಕನಿಂದ ಹೀನ ಕೃತ್ಯ: ನೊಂದ ಯುವತಿ ದೂರು
Views: 116
ಕನ್ನಡ ಕರಾವಳಿ ಸುದ್ದಿ: ಮದುವೆ ಬಗ್ಗೆ ಜಾತಕ ತೋರಿಸಲು ಹೋದಾಗ ಅರ್ಚಕ ಅತ್ಯಾಚಾರ ನಡೆಸಿರೋ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಜಾತಕದಲ್ಲಿ ದೋಷ ಇದೆ. ತಡೆ ಹೊಡೆಯಬೇಕು ಅಂತ ಯುವತಿಗೆ ನಂಬಿಸಿದ್ದ ಅರ್ಚಕ 2025 ನವೆಂಬರ್ 23 ರಿಂದ 2026 ಫೆಬ್ರವರಿ 2ರವರೆಗೆ ಹಲವು ಬಾರಿ ಅತ್ಯಾಚಾರ ನಡೆಸಿರೋದಾಗಿ ಆರೋಪ ಕೇಳಿ ಬಂದಿದೆ.
ಹೊರಟ್ಟಿ ಗ್ರಾಮದ ಪುರಾತನ ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕನಿಂದ 23 ವರ್ಷದ ಯುವತಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಲಾಗಿದೆಯಂತೆ. ಆರೋಪಿ ಅರ್ಚಕ ಕೃಷ್ಣ ವಿರುದ್ಧ ನೊಂದ ಯುವತಿ ಬಣಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಬಣಕಲ್ ಪೊಲೀಸರು ಆರೋಪಿ ಅರ್ಚಕ ಕೃಷ್ಣರಾವ್ ರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.






