ಶಿಕ್ಷಣ
ಮದ್ಯಪಾನ ಮಾಡಿ ಅಡ್ಡಾ ದಿಡ್ಡಿ ಕಾರು ಚಲಾಯಿಸಿದ ಶಾಲಾ ಮುಖ್ಯೋಪಾಧ್ಯಾಯಿನಿ ಅರೆಸ್ಟ್

Views: 177
ಕನ್ನಡ ಕರಾವಳಿ ಸುದ್ದಿ: ಮದ್ಯಪಾನ ಮಾಡಿ ಅಡ್ಡಾ ದಿಡ್ಡಿ ಕಾರು ಚಲಾಯಿಸಿದ ಶಾಲಾ ಮುಖ್ಯೋಪಾಧ್ಯಾಯಿನಿಯನ್ನು ಅರೆಸ್ಟ್ ಮಾಡಿದ ಘಟನೆ ವರದಿಯಾಗಿದೆ.
ಕಾಞಂಗಾಡಿನ ರಾಷ್ಟ್ರೀಯ ಹೆದ್ದಾರಿಯ ಐಂಬೋತ್ ಎಂಬಲ್ಲಿ ಪೋಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಅಪಾಯಕಾರಿ ರೀತಿಯಲ್ಲಿ ಬರುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಚಾಲಕಿಯನ್ನು ಬೈತ್ ಲೇಸರ್ ಮೂಲಕ ಪರಿಶೋಧಿಸಿದಾಗ ಅವರು ಮದ್ಯಪಾನ ಮಾಡಿರುವುದು ಸಾಬೀತಾಗಿದೆ. ಚಾಲಕಿ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯಾಗಿದ್ದು ಪೊಲೀಸರು ಕಾರು ಸಹಿತ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.