ಜನಮನ

ಭಾರೀ ಮಳೆ: ಶಿರಾಡಿ, ಬಾಳೆಬರೆ, ಸೋಮೇಶ್ವರ ಗುಡ್ಡ ಕುಸಿತ,ವಾಹನ ಸಂಚಾರ ವ್ಯತ್ಯಯ

Views: 166

ಮಂಗಳೂರು: ನಿರಂತರ  ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು – ಮಂಗಳೂರು ನಡುವಿನ ಶಿರಾಡಿ ಘಾಟಿ ಹತ್ತಿರದ ಕೆಲವೆಡೆ ಗುಡ್ಡ ಕುಸಿತವಾಗಿ ವಾಹನ ಸಂಚಾರ ವ್ಯತ್ಯಯವಾಗಿದೆ.

ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಅಲ್ಲಲ್ಲಿ ಭೂ ಕುಸಿತ ಆರಂಭವಾಗಿದ್ದು, ಹಿರಿಯ ಅಧಿಕಾರಿಗಳ ಸೂಚನೆಯಂತೆ ಲಘು ವಾಹನಗಳಿಗೆ ಕಾಡ ಮನೆ ಎಸ್ಟೇಟ್‌ ಮೂಲಕ ಸಾಗುವಂತೆ ತಿಳಿಸಲಾಗಿದೆ. ಘನ ವಾಹನಗಳು ಹೆದ್ದಾರಿಯಲ್ಲೇ ಸಾಗುತ್ತಿವೆ.

ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿಯ ಹೊಸಂಗಡಿ ಸಮೀಪದ ಹುಲಿಕಲ್‌ – ಬಾಳೆಬರೆ ಘಾಟಿಯಲ್ಲಿ ಮಳೆಗೆ ಬುಧವಾರ ಗುಡ್ಡ ಕುಸಿದಿದೆ. ತೆರವಿಗೆ ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

ಬೈಂದೂರಿನ ಪಡುವರಿ ಗ್ರಾಮದ ಸೋಮೇಶ್ವರ ಗುಡ್ಡದಿಂದ ಅಪಾರ ಪ್ರಮಾಣದ ಮಣ್ಣು ರಸ್ತೆಗೆ ಬೀಳುತ್ತಿದೆ.ಯಾವುದೇ ಕ್ಷಣದಲ್ಲೂ ಗುಡ್ಡ ಕುಸಿತದ ಭೀತಿ ಉಂಟಾಗಿದೆ.

 

Related Articles

Back to top button
error: Content is protected !!