ಬಿದ್ಕಲ್ ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್: ಕೆನರಾ ಬ್ಯಾಂಕ್ ಪ್ರಾಯೋಜಿತ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ
ಒಂದು ಊರಿನ ದೇವಾಲಯಕ್ಕಿರುವಷ್ಟೇ ಶ್ರೇಷ್ಟತೆ ಆ ಊರಿನ ವಿದ್ಯಾಲಯಕ್ಕೂ ಇದೆ. ಇವೆರಡೂ ಉನ್ನತಿ ಹೊಂದಿದರೆ ಮಾತ್ರ ಆ ಊರಿಗೆ ಶೋಭೆ-----ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಶ್ರೀ ಎಚ್.ಕೆ. ಗಂಗಾಧರ ರಾವ್

Views: 174
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ವಲಯದ ಬಿದ್ಕಲ್ ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಕೆನರಾ ಬ್ಯಾಂಕ್ ಬಿದ್ಕಲ್ ಕಟ್ಟೆಯ ಸಹಯೋಗದೊಂದಿಗೆ ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಉಡುಪಿ ಇವರು ಸಿ.ಎಸ್.ಆರ್ ಅನುದಾನದಲ್ಲಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವು ಜೂನ್ 28ರಂದು ನಡೆಯಿತು.
ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಶ್ರೀ ಎಚ್.ಕೆ. ಗಂಗಾಧರ ರಾವ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಒಂದು ಊರಿನ ದೇವಾಲಯಕ್ಕಿರುವಷ್ಟೇ ಶ್ರೇಷ್ಟತೆ ಆ ಊರಿನ ವಿದ್ಯಾಲಯಕ್ಕೂ ಇದೆ. ಇವೆರಡೂ ಉನ್ನತಿ ಹೊಂದಿದರೆ ಮಾತ್ರ ಆ ಊರಿಗೆ ಶೋಭೆ. ದೇವಾಲಯ ಮತ್ತು ವಿದ್ಯಾಲಯವನ್ನು ಅಭಿವೃದ್ಧಿಗೊಳಿಸುವುದು ಆಯಾಯ ಊರಿನ ಸಮಸ್ತ ನಾಗರಿಕರ ಆದ್ಯ ಕರ್ತವ್ಯ. ಒಗ್ಗಟ್ಟು ಮತ್ತು ಸಾಮೂಹಿಕ ಪ್ರಯತ್ನದಿಂದ ಇದು ಸಾಧ್ಯ. ದಾನಿಗಳ ಸಂಖ್ಯೆ ಜಾಸ್ತಿಯಾದಷ್ಟೂ ಊರಿನ ಸಮಗ್ರ ಏಳಿಗೆ ಸಾಧ್ಯವಾಗುವುದು ಎಂದರು.
ಕೆನರಾ ಬ್ಯಾಂಕ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀ ಪೂರ್ಣಾನಂದ ಅವರು ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುತ್ತಿರುವ ವಿಶೇಷ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಶ್ರೀ ವಿಘ್ನೇಶ್ವರ ಭಟ್ ಅವರು ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕಲ್ಪಿಸಿ, ಮಕ್ಕಳ ಆರೋಗ್ಯ ವೃದ್ಧಿಗೆ ವಿಶೇಷ ಕೊಡುಗೆ ನೀಡಿದ ಕೆನರಾ ಬ್ಯಾಂಕ್ ಸಹಕಾರವನ್ನು ಕೃತಜ್ಞತೆಯಿಂದ ಶ್ಲಾಘಿಸಿದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಪ್ರತೀ ತರಗತಿಯಲ್ಲಿ ಅಗ್ರ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಹನಿಕಾ ಜಿ ಶೆಟ್ಟಿ, ಯುಕ್ತಿ, ನಿರೀಕ್ಷಾ, ಸಾನ್ವಿ ಹೆಚ್, ಮೃದುಲ್ ಶೆಟ್ಟಿಗಾರ್, ಶ್ರೇಯಾ ಎಸ್ ಸಾಲಿಯಾನ್, ದೀಕ್ಷಾ ಎನ್ ಜೋಗಿ, ಪ್ರಣಮ್ಯ, ನಾಗರತ್ನ, ಪ್ರತೀಕ್ಷಾ, ಅಕ್ಷಯ್ ಕುಮಾರ್ ಎನ್, ಸಿಂಚನಾ ಇವರನ್ನು ಕೆನರಾ ಬ್ಯಾಂಕ್ ವತಿಯಿಂದ ಗೌರವಿಸಲಾಯಿತು.
ಸಮಾರಂಭದಲ್ಲಿ ಕೆನರಾ ಬ್ಯಾಂಕ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಶ್ರೀ ಪವಿತ್ರಕುಮಾರ್ ದಾಸ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮನೋಜ್ ಕುಮಾರ್ ಶೆಟ್ಟಿ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿಯ ಮ್ಯಾನೇಜರ್ ಶ್ರೀ ಪ್ರಭಾಕರ ಶೆಟ್ಟಿ, ಬಿದ್ಕಲ್ ಕಟ್ಟೆಯ ಶಾಖಾ ವ್ಯವಸ್ಥಾಪಕರಾದ ಶ್ರೀ ಬಾಲ ಸಾಹೇಬ್, ಜನ್ನಾಡಿ ಶಾಖಾ ವ್ಯವಸ್ಥಾಪಕರಾದ ಶ್ರೀ ಕಿರಣ್, ಹಳ್ಳಾಡಿ ಶಾಖಾ ವ್ಯವಸ್ಥಾಪಕರಾದ ಶ್ರೀ ಮಿಥುನ್, ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ವಿಘ್ನೇಶ್ವರ ಭಟ್, ಉಪಪ್ರಾಂಶುಪಾಲರಾದ ಶ್ರೀ ಕರುಣಾಕರ ಶೆಟ್ಟಿ, ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ ಶೆಟ್ಟಿಗಾರ್, ಹಳೆವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಶ್ರೀ ಬಿ ದಿವಾಕರ ಆಚಾರ್, ನಿವೃತ್ತ ಅಧ್ಯಾಪಕರಾದ ಶ್ರೀ ಉದಯ್ ಕುಮಾರ್ ಶೆಟ್ಟಿ, ಶ್ರೀ ಬಿ ಚಂದ್ರ ಶೇಖರ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸುಲೋಚನಾ, ಸಹ ಶಿಕ್ಷಕ ರಾಜೀವ ಕುಲಾಲ್, ಶ್ರೀನಿವಾಸ, ಸಹ ಶಿಕ್ಷಕಿಯರಾದ ಶ್ರೀಮತಿ ಚಿತ್ರಾಕುಮಾರಿ, ರಶ್ಮಿ, ಲಲಿತಾ, ಮಾಲತಿ, ಶಾರದಾ, ಪೂರ್ಣಿಮಾ, ಮಮತಾ, ರೂಪಾ ಮಟ್ಟಿಕೋಟಿ, ಅತಿಥಿ ಶಿಕ್ಷಕಿ ಮಹಾಲಕ್ಷ್ಮೀ, ಗೌರವ ಶಿಕ್ಷಕಿ ಭಾರತಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಭಾರ ಮುಖ್ಯೋಪಾಧ್ಯಾರಾದ ಶ್ರೀ ಸತೀಶ ಶೆಟ್ಟಿಗಾರ್ ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಶಾರದ ವಂದಿಸಿದರು. ಸಹ ಶಿಕ್ಷಕಿ ಶ್ರೀಮತಿ ಮಾಲತಿ ಕಾರ್ಯಕ್ರಮ ನಿರ್ವಹಿಸಿದರು.