ರಾಜಕೀಯ

ಬಿಜೆಪಿಯವರು ಟಿಕೆಟ್ ಕೊಡ್ತೀನಿ.. ಕೊಡ್ತೀನಿ ಅಂತಾ ಸತಾಯಿಸಿದ್ರು ಟಿಕೆಟ್ ಕೊಡಿಸಿದ್ರೆ ನಾನ್ಯಾಕೆ ಕಾಂಗ್ರೆಸ್ ಸೇರ್ತಿದ್ದೆ?: ಯೋಗೇಶ್ವರ್ 

Views: 64

ಕನ್ನಡ ಕರಾವಳಿ ಸುದ್ದಿ: ಬಿಜೆಪಿ-ಜೆಡಿಎಸ್ ನಾಯಕರು ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಿದ್ದರು. ನನ್ನನ್ನು ರಾಜಕೀಯವಾಗಿ ಮುಗಿಸುವ ಯತ್ನ ಮಾಡಿದ್ದರು ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆರೋಪಿಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಯೋಗೇಶ್ವರ್ ಇಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಪಿ.ಯೋಗೇಶ್ವರ್, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿತ್ತು. ಒಂದೆರಡು ದಿನ ನಾನು ತಡ ಮಾಡಿದ್ರೇ ರಾಜಕೀಯವಾಗಿಯೇ ನನ್ನನ್ನು ಮುಗಿಸುವ ಕಾರ್ಯ ನಡೆದಿತ್ತು ಎಂದು ಹೇಳಿದ್ದಾರೆ.

ಎರಡು ದಿನ ತಡ ಮಾಡಿದ್ರೆ ನನ್ನನ್ನು ರಾಜಕೀಯವಾಗಿ ಮುಗಿಸುವ ಕಾರ್ಯ ನಡೆದಿತ್ತು: ಸಿ.ಪಿ.ಯೋಗೇಶ್ವರ್ ಹೇಳಿಕೆ

ಬಿಜೆಪಿಯವರು ಟಿಕೆಟ್ ಕೊಡ್ತೀನಿ, ಕೊಡ್ತೀನಿ ಅಂತಾ ಸತಾಯಿಸಿದ್ರು. ಅಧ್ಯಕ್ಷರು ಟಿಕೆಟ್ ಕೊಡಿಸಿದ್ರೆ ನಾನ್ಯಾಕೆ ಕಾಂಗ್ರೆಸ್ ಸೇರ್ತಿದ್ದೆ? ಇನ್ನು ಟಿಕೆಟ್ ಕೇಳಿದಾಗ ಹೆಚ್.ಡಿ.ಕುಮಾರಸ್ವಾಮಿಯವರು ಕೂಡ ಹಾರಿಕೆ ಉತ್ತರ ನೀಡಿದರು. ಚನ್ನಪಟ್ಟಣ ಅಲ್ಲೇ ಇದೆ ಎಲ್ಲಿ ಹೋಗಿದೆ…ಅಂತ ಹೇಳಿದರು,. ಅಲ್ಲಿಗೆ ನಿಖಿಲ್ ಅವರನ್ನು ಕಣಕ್ಕಿಳಿಸುವುದು ನಿಖರವಾಗಿತ್ತು. ಹಾಗಾಗಿ ತಡ ಮಾಡದೇ ನಾನು ಕಾಂಗ್ರೆಸ್ ಸೇರಿದೆ ಎಂದು ತಿಳಿಸಿದರು.

Related Articles

Back to top button
error: Content is protected !!