ಶಿಕ್ಷಣ
ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಬಂಧ ಸ್ಪರ್ಧೆ: ನವ್ಯಶ್ರೀ ಶೆಟ್ಟಿಗಾರ್ ಅವರಿಗೆ ರಾಜ್ಯಪಾಲರಿಂದ ಪುರಸ್ಕಾರ
Views: 117
ಕನ್ನಡ ಕರಾವಳಿ ಸುದ್ದಿ: 16ನೆಯ ರಾಷ್ಟ್ರೀಯ ಮತದಾರರ ದಿನಾಚರಣೆ 2026 ಇದರ ಅಂಗವಾಗಿ ನಡೆದ ಶಾಲೆಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಗಳ ಮಹತ್ವ ಎಂಬ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ KPS ಬ್ರಹ್ಮಾವರದ ಹೆಮ್ಮೆಯ ವಿದ್ಯಾರ್ಥಿನಿಯಾದ ಕುI ನವ್ಯಶ್ರೀ ತಾಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ವಿಜೇತಳಾಗಿ ಅಂತಿಮವಾಗಿ 33 ಜಿಲ್ಲೆಗಳ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾಳೆ.

ಕುI ನವ್ಯಶ್ರೀ ಇಂದು ಬೆಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರಚಂದ ಗೆಹಲೊಟ್ ಇವರಿಂದ ಪ್ರಶಸ್ತಿ ಪತ್ರ ನಗದು ಪುರಸ್ಕಾರವನ್ನು ಪಡೆದಿರುತ್ತಾಳೆ.
ಇವರು ಬ್ರಹ್ಮಾವರ ಬೈಕಾಡಿಯ ಶ್ರೀಮತಿ ಸುಧಾ ಮತ್ತು ಅಶೋಕ್ ಶೆಟ್ಟಿಗಾರ್ ದಂಪತಿಗಳ ಸುಪುತ್ರಿ






