ಧಾರ್ಮಿಕ
ಬಾರ್ಕೂರು 3ನೇ ಮೊಕ್ತೇಸರರ ಆಯ್ಕೆ ಸಂಬಂಧ ಕುಂದಾಪುರ ಚಾರುಕೊಟ್ಟಿಗೆಯಲ್ಲಿ ಘರ್ಷಣೆ

Views: 79
ಕುಂದಾಪುರ: ಬಾರ್ಕೂರಿನ ಶ್ರೀ ಕಾಳಿಕಾಂಬ ದೇಗುಲದ ಮೂರನೇ ಮೊಕ್ತೇಸರರ ಆಯ್ಕೆಗಾಗಿ ನಡೆದ ಮಹಾಸಭೆಯ ವಿಷಯಕ್ಕೆ ಸಂಬಂಧಿಸಿದಂತೆ ಕುಂದಾಪುರ ತಾಲೂಕಿನ ಚಾರುಕೊಟ್ಟಿಗೆ ಬಾರ್ ಬಳಿ ಎರಡು ತಂಡಗಳ ಮಧ್ಯೆ ಹಲ್ಲೆ ಜೀವ ಬೆದರಿಕೆ ಹಾಕಿದ ಘಟನೆ ನಡೆಯಿತು.
ಶರತ್ ಹಾಗೂ ಕೃಷ್ಣಯ್ಯ ಅವರು ನಿಂದಿಸಿ, ಜೀವ ಬೆದರಿಕೆ ಹಾಕಿದ್ದಲ್ಲದೆ ಹಲ್ಲೆ ಮಾಡಿರುವುದಾಗಿ ಕೋಟೇಶ್ವರ ರತೀಶ್ ದೂರು ನೀಡಿದ್ದಾರೆ.
ರತೀಶ್ ಆಚಾರ್ ಹಾಗೂ ರಾಘವೇಂದ್ರ ಅವರು ನನ್ನ ಮಾವ ಕೃಷ್ಣಯ್ಯ ಹಾಗೂ ನನಗೆ ಹಲ್ಲೆ ಮಾಡಿ ಜೀವ ಬೇದರಿಕೆ ಹಾಕಿದ್ದಾರೆ ಎಂದು ಶ್ರೀಧರ್ ಪ್ರತಿ ದೂರು ನೀಡಿದ್ದಾರೆ.
ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ






