ರಾಜಕೀಯ

ನಿಖಿಲ್ ಕುಮಾರಸ್ವಾಮಿಗೆ ಸೋಲು..ಮೈತ್ರಿಯೇ ಮುಳುವಾಯ್ತಾ..? ಕುಮಾರಣ್ಣ ಕಂಗಾಲು..ಅಭಿಮಾನಿ ಆತ್ಮಹತ್ಯೆಗೆ ಯತ್ನ 

Views: 105

ಕನ್ನಡ ಕರಾವಳಿ ಸುದ್ದಿ: ನಿಖಿಲ್‌ ಕುಮಾರಸ್ವಾಮಿಯನ್ನು ಈ ಬಾರಿ ಗೆಲ್ಲಿಸಬೇಕು ಅಂತಾನೇ ಕುಮಾರಸ್ವಾಮಿ ಮತ್ತು ದೇವೇಗೌಡ್ರು ಪಣತೊಟ್ಟಿದ್ದರು.ಚೆನ್ನಪಟ್ಟಣ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡಿದ್ದರು. ಆದರೂ ನಿಖಿಲ್‌ಗೆ ಹ್ಯಾಟ್ರಿಕ್‌ ಸೋಲು ತಪ್ಪಿಸಲು ಸಾಧ್ಯವಾಗಿಲ್ಲ.

ಕುಮಾರಸ್ವಾಮಿಗೆ ಬಿದ್ದಿರೋ ವೋಟ್‌ಗಳು ನಿಖಿಲ್‌ಗೆ ಯಾಕೆ ಬಿದ್ದಿಲ್ಲ ಅಂತಾ ನೋಡ್ತಾ ಹೋದರೆ ಕಾಣಿಸೋದು ಕಾಂಗ್ರೆಸ್‌ನ ಗ್ಯಾರಂಟಿ. ಹೌದು, ಮಹಿಳಾ ಮತಗಳನ್ನು ಕಾಂಗ್ರೆಸ್‌ನತ್ತ ದೊಡ್ಡ ಪ್ರಮಾಣದಲ್ಲಿ ಸೆಳೆದಿದ್ದೇ ಈ ಗ್ಯಾರಂಟಿಗಳು. ಅದರಲ್ಲಿಯೂ ಎಲೆಕ್ಷನ್‌ ಇನ್ನೇನು ಒಂದು ವಾರ ಇದೆ ಅನ್ನೋ ಟೈಮ್‌ನಲ್ಲಿ ಚನ್ನಪಟ್ಟಣ ಕ್ಷೇತ್ರದ ಗೃಹ ಲಕ್ಷ್ಮಿಯರಿಗೆ ಎರಡು ಮೂರರು ತಿಂಗಳ ಹಣ ಬಂದಿತ್ತು. ಇದು ಸ್ತ್ರೀಯರ ವೋಟ್‌ಗಳು ಕಾಂಗ್ರೆಸ್‌ನತ್ತ ಹೋಗುವಂತೆ ಮಾಡಿವೆ.

ಈ ಬಾರಿ ನಿಖಿಲ್‌ ಕೇವಲ ಜೆಡಿಎಸ್‌ ಕ್ಯಾಂಡಿಡೇಟ್‌ ಆಗಿ ಅಖಾಡಕ್ಕಿಳಿದಿರಲಿಲ್ಲ. ದೋಸ್ತಿ ಪಡೆ ಅಭ್ಯರ್ಥಿಯಾಗಿರುವುದರಿಂದ  ಎನ್‌ಡಿಎ ಅಭ್ಯರ್ಥಿ ಅಂತಾನೇ ಗಣನೆಗೆ ತೆಗೆದುಕೊಳ್ಳಲಾಗಿತ್ತು, ಚನ್ನಪಟ್ಟಣದಲ್ಲಿ ಮೈತ್ರಿಯಿಂದ ಆಗಿರೋ ಬಹುದೊಡ್ಡ ಸಮಸ್ಯೆ ಅಂದ್ರೆ, ಅಲ್ಪಸಂಖ್ಯಾತ ವೋಟ್‌ಗಳು ದಳದಿಂದ ಕೈತಪ್ಪಿ ಹೋಗುವಂತೆ ಆಯ್ತು. ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿಯೇ ಜೆಡಿಎಸ್‌ಗೆ ಮುಸ್ಲಿಂ ಮತಗಳು ಕೈತಪ್ಪಿವೆ ಅನ್ನೋದು ಗ್ಯಾರಂಟಿ.

ಕ್ಷೇತ್ರದಲ್ಲಿ ಯೋಗೇಶ್ವರ್‌ 2018 ಮತ್ತು 2013 ರಲ್ಲಿ ಸೋಲು ಕಂಡಿದ್ದರು. ಆದರೆ ಆ ಸೋಲು ಭಾರೀ ಅಂತರದ ಸೋಲು ಅಲ್ಲವೇ ಅಲ್ಲವಾಗಿತ್ತು. ಅಂದರೆ ಕ್ಷೇತ್ರದಲ್ಲಿ ಯೋಗೇಶ್ವರ್‌ಗೆ ತಮ್ಮದೇ ಆದ ಸ್ವಂತ ವೋಟ್‌ ಇತ್ತು. ಯೋಗೇಶ್ವರ್‌ ಪಕ್ಷೇತರವಾಗಿ ಸ್ಪರ್ಧೆ ಮಾಡಲಿ, ಬಿಜೆಪಿಗೆ ಹೋಗಲಿ, ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿ. ಯಾವ ಪಕ್ಷಕ್ಕೆ ಹೋದರೂ ಆ ವೋಟ್‌ಗಳು ಅವರ ಜೊತೆಗೆ ಹೋಗ್ತಾ ಇತ್ತು. ಈ ಬಾರಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಯೋಗೇಶ್ವರ್‌ ಜಂಪ್‌ ಆಗ್ತಾ ಇದ್ದಂತೆ ಆ ವೋಟ್‌ಗಳು ಹೋಗಿವೆ. ಹಾಗೇ ಕ್ಷೇತ್ರದಲ್ಲಿದ್ದ ಕಾಂಗ್ರೆಸ್‌ ವೋಟ್‌ಗಳ ಜೊತೆ ಅದು ಕ್ರೋಢೀಕರಣವಾಗಿದೆ. ಇದು ಯೋಗೇಶ್ವರ್‌ ಗೆಲುವಿನಲ್ಲಿ ಮುಖ್ಯಪಾತ್ರ ವಹಿಸಿದೆ. ನಿಖಿಲ್‌ ಕುಮಾರಸ್ವಾಮಿಗೆ ಆಘಾತ ಮೂಡಿಸಿದೆ.

ಕಳೆದ ಎರಡು ಎಲೆಕ್ಷನ್‌ನಲ್ಲಿ ಯೋಗೇಶ್ವರ್‌ ಸೋಲು ಕಂಡಿದ್ದರು. ಇದರಿಂದ ಯೋಗೇಶ್ವರ್‌ ಬಗ್ಗೆ ಕ್ಷೇತ್ರದಲ್ಲಿ ಅನಕಂಪ ಸೃಷ್ಟಿಯಾಗಿತ್ತು. ಇನ್ನೊಂದು ಮಹತ್ವದ ವಿಚಾರ ಅಂದ್ರೆ, ಯೋಗೇಶ್ವರ್‌ ಸ್ಥಳೀಯ ಅಭ್ಯರ್ಥಿ ಅನ್ನೋದು ಇತ್ತು. ಅದೆಲ್ಲವೂ ಚುನಾವಣೆಯಲ್ಲಿ ಲೆಕ್ಕಾಚಾರಕ್ಕೆ ಬಂತು. ಹಾಗೇ ಕಳೆದ ಲೋಕಸಮರದ ವೇಳೆ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಮಂಜುನಾಥ್‌ ಗೆಲ್ಲಿಸುವಲ್ಲಿ ಯೋಗೇಶ್ವರ್‌ ಶ್ರಮಿಸಿದ್ದರು.

ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಪರಾಭವಗೊಂಡಿದ್ದರಿಂದ ಆಘಾತಕ್ಕೊಳಗಾಗಿರುವ ಪಕ್ಷದ ಕಾರ್ಯಕರ್ತ ಅಭಿ ಎಂಬುವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲ್ಲೂಕಿನ ಕೂಡ್ಲೂರು ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ವಿಷ ಕುಡಿಯುವುದಕ್ಕೆ ಮುಂಚೆ ಮರಣಪತ್ರ ಬರೆದಿರುವ ಅವರು, ‘ನಾನು ನಿಖಿಲ್ ಕುಮಾರಸ್ವಾಮಿ ಸೋಲಿಗೆ ಸಾಯುತ್ತಿದ್ದೇನೆ. ಅವರ ಅಭಿಮಾನಿ ನಾನು. ನನ್ನ ಸಾವಿಗೆ ನಾನೇ ಕಾರಣ. ಜೈ ಜೆಡಿಎಸ್ ಆ್ಯಂಡ್ ಎನ್‌ಡಿಎ’ ಎಂದು ಬರೆದು ಸಹಿ ಮಾಡಿದ್ದಾರೆ.

ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅಭಿ ಅವರಿಗೆ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯಕ್ಕೆ ಸ್ಥಳಾಂತರಿಸಲಾಗಿದೆ. ಘಟನೆ ಕುರಿತು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!