ರಾಜಕೀಯ

ನಾಲ್ವರು ನಾಮ ನಿರ್ದೇಶನ MLC ಪಟ್ಟಿ ಕೊನೆಗೂ ಅಂತಿಮ

Views: 76

ಕನ್ನಡ ಕರಾವಳಿ ಸುದ್ದಿ: ವಿಧಾನ ಪರಿಷತ್ತಿಗೆ ನಾಲ್ಕು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವ ಸಂಬಂಧ ಸರ್ಕಾರ ಕಳುಹಿಸಿದ ಪಟ್ಟಿಗೆ ರಾಜ್ಯಪಾಲರು ಮುದ್ರೆ ಒತ್ತಿದ್ದಾರೆ.

ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಡಾ.ಆರತಿ ಕೃಷ್ಣ ಎಫ್ ಹೆಚ್ ಜಕ್ಕಪ್ಪನವ‌ರ್, ಶಿವಕುಮಾರ್ ಕೆ ಅವರ ಹೆಸರುಗಳು ಇದ್ದ ಪಟ್ಟಿಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ .

ಜಕ್ಕಪ್ಪ ಮತ್ತು ಆರತಿ ಕೃಷ್ಣಕಾಂಗ್ರೆಸ್ ಪಕ್ಷದ ಹೈಕಮ್ಯಾಂಡ್ ಕೋಟಾದ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದರೆ, ಇನ್ನೂ ಸಿಎಂ ಕೋಟಾದಿಂದ ರಮೇಶ್ ಬಾಬು ಮತ್ತು ಪತ್ರಕರ್ತ ಶಿವಕುಮಾರ್ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.

ಮೂವರು 6 ವರ್ಷಗಳ ಅವಧಿಗೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇನ್ನು ರಮೇಶ್ ಬಾಬು 2026ರ ಜುಲೈ 21ರವರೆಗೆ ಅಧಿಕಾರವಧಿ ಇರಲಿದೆ.

Related Articles

Back to top button