ರಾಜಕೀಯ
ನಾಯಕತ್ವ ಬದಲಾವಣೆ ಕುರ್ಚಿ ಕದನ: ಸಚಿವ ಕೆ.ಜೆ.ಜಾರ್ಜ್, ಡಿಕೆಶಿ ಏನಿದು ರಹಸ್ಯ ಮಾತುಕತೆ!
Views: 50
ಕನ್ನಡ ಕರಾವಳಿ ಸುದ್ದಿ: ನಾಯಕತ್ವ ಬದಲಾವಣೆ ಕುರ್ಚಿ ಕದನದ ತೆರೆಮರೆಯಲ್ಲೇ ಇದ್ದ ಸಚಿವ ಕೆ.ಜೆ.ಜಾರ್ಜ್ ಸದ್ಯ ಮುನ್ನೆಲೆಗೆ ಬಂದಿದ್ದಾರೆ. ನಿನ್ನೆ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ರಾಜ್ಯಕ್ಕೆ ಬಂದಿದ್ದ ಎಐಸಿಸಿ ಅಧ್ಯಕ್ಷರು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಂತೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಕೆ.ಜೆ.ಜಾರ್ಜ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.
ಸಚಿವ ಕೆ.ಜೆ.ಜಾರ್ಜ್ ಹೈಕಮಾಂಡ್ ನಾಯಕರಿಗೆ ತೀರ ಹತ್ತಿರವಾಗಿದ್ದಾರೆ. ಹೈಕಮಾಂಡ್ಗೆ ಆಪ್ತರಾಗಿರುವ ಸಚಿವ ಕೆ.ಜೆ.ಜಾರ್ಜ್ ನಿವಾಸಕ್ಕೆ ಭೇಟಿ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ.. ಈ ವೇಳೆ ಪವರ್ ಫೈಟ್ ಗೆ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಜಾರ್ಜ್ಗೆ ಡಿಕೆಶಿ ಮನವಿ ಮಾಡಿದ್ದಾರೆ ಎನ್ನಲಾಗಿದೆ
ನಿನ್ನೆ ಮಧ್ಯಾಹ್ನ ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿಯಾಗಿದ್ದ ಸಚಿವ ಕೆ.ಜೆ.ಜಾರ್ಜ್ ಮಾತುಕತೆ ನಡೆಸಿದ್ದರು.ಇದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ ಜೊತೆಗೂ ಸಚಿವ ಜಾರ್ಜ್ ನಡೆಸಿದ್ದರು.






