ಧಾರ್ಮಿಕ

ಧರ್ಮಸ್ಥಳದ ಸ್ನಾನಘಟ್ಟದ ಸಮೀಪ 13ನೇ ಸ್ಥಳದಲ್ಲಿ ಜಿಪಿಆ‌ರ್ ಕಾರ್ಯಾಚರಣೆಯಲ್ಲಿ ಏನೇನು ಸಿಕ್ತು?

Views: 304

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ಸ್ನಾನಘಟ್ಟದ ಸಮೀಪದಲ್ಲಿ ಗುರುತಿಸಲಾದ 13ನೇ ಸ್ಥಳದಲ್ಲಿ ಇಂದು ಶೋಧ ಕಾರ್ಯಕ್ಕಾಗಿ ಜಿಪಿಆ‌ರ್ ಯಂತ್ರವನ್ನು ತರಲಾಗಿದ್ದು, ಎಸ್‌ಐಟಿ ಮುಖ್ಯಸ್ಥ ಡಾ. ಪ್ರಣವ್‌ ಮೊಹಂತಿ ಮತ್ತು ಎಸಿ ಸ್ಟೆಲ್ಲಾ ವರ್ಗೀಸ್ ಅವರ ಸಮ್ಮುಖದಲ್ಲಿ ಜಿಪಿಆರ್ ತನ್ನ ಕಾರ್ಯವನ್ನು ಮುಂದುವರಿಸಿ ಇದೀಗ GPR ಯಂತ್ರವನ್ನು ಹಿಂದಿರುಗಿಸಲಾಗಿದೆ.

ಅನಾಮಿಕ ದೂರುದಾರನು ಮೃತದೇಹವನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ ಪ್ರಕರಣದ ತನಿಖೆಯಲ್ಲಿ ಪ್ರಮುಖ ಬೆಳವಣಿಗೆಯಾಗಿ, ಆಗಸ್ಟ್ 11ರಂದು ಸಂಜೆ 2:45ಕ್ಕೆ ಜಿಪಿಆರ್ ಯಂತ್ರದ ಮೂಲಕ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿತ್ತು.

200 ಮೀಟರ್ ನಷ್ಟು ಆಳಕ್ಕೆ ಜಿಪಿಆರ್ ಸಿಗ್ನಲ್‌ ಪರೀಕ್ಷೆ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗದೇ ಜಿಪಿಆರ್ ಯಂತ್ರ ಹಿಂದಿರುಗಿದೆ ಎನ್ನಲಾಗಿದೆ.

ಎಸ್‌ಐಟಿ ಮುಖ್ಯಸ್ಥ ಪ್ರಣಾಬ್ ಮೊಹಂತಿ ಸ್ಥಳದಿಂದ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ತೆರಳಿದ್ದಾರೆ. ಇದೀಗ ಪಾಯಿಂಟ್ 13ರಲ್ಲಿ ಜೆಸಿಬಿ ಯಂತ್ರದ ಮೂಲಕ ಉತ್ಪನನ ಪ್ರಾರಂಭವಾಗಿದೆ. ಸ್ಥಳದಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮುಖ್ಯಸ್ಥರು ಉಪಸ್ಥಿತರಿದ್ದಾರೆ.

Related Articles

Back to top button
error: Content is protected !!