ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರುದಿನವೇ ನೂತನ ದಂಪತಿ ಅನುಮಾನಾಸ್ಪದ ಸಾವು!

Views: 183
ಕನ್ನಡ ಕರಾವಳಿ ಸುದ್ದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರುದಿನವೇ ನೂತನ ದಂಪತಿ ವಧು ತನ್ನ ಅತ್ತೆಯ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬೆಳಕಿಗೆ ಬಂದಿದೆ.
ಮಾರ್ಚ್ 7 ರಂದು ಮದುವೆ ನಡೆದಿತ್ತು. ಮಾರ್ಚ್ 8 ರಂದು ವಧು ತನ್ನ ಅತ್ತೆಯ ಮನೆಗೆ ತೆರಳಿದ್ದಳು ಮತ್ತು ಇಬ್ಬರೂ ಮದುವೆಯ ರಾತ್ರಿ ಸಾವನ್ನಪ್ಪಿದ್ದಾರೆ. ಬೆಳಗ್ಗೆ 7 ಗಂಟೆಯಾದರೂ ವಧು-ವರರು ಬಾಗಿಲು ತೆರೆಯದಿದ್ದಾಗ ಅನುಮಾನ ಬಂದು ಮನೆಯವರು ಬಾಗಿಲು ಒಡೆದಾಗ ಎಲ್ಲರೂ ಆಘಾತಕ್ಕೊಳಗಾಗಾಗಿದ್ದಾರೆ. ವಧು ಹಾಸಿಗೆಯ ಮೇಲೆ ಬಿದ್ದಿದ್ದರೆ, ವರನು ಛಾವಣಿಯ ಕೊಕ್ಕೆಯಲ್ಲಿ ನೇತಾಡುತ್ತಿದ್ದ. ತಕ್ಷಣವೇ ಪೊಲೀಸರು ಮತ್ತು ಹುಡುಗಿಯ ಕುಟುಂಬಕ್ಕೆ ಮಾಹಿತಿ ನೀಡಲಾಯಿತು.ಮಗಳ ಸಾವಿನ ಸುದ್ದಿ ಕೇಳಿ ತಾಯಿ ತೀವ್ರ ಅಸ್ವಸ್ಥರಾಗಿದ್ದಾರೆ.
ಮಾಹಿತಿ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ನವದಂಪತಿಗಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಸಾವಿನ ಕಾರಣ ತಿಳಿಯಬೇಕಿದೆ.