ರಾಜಕೀಯ
ದಲಿತ ಮುಖ್ಯಮಂತ್ರಿ ಚರ್ಚೆಯಾದರೆ ಖರ್ಗೆ ಬಿಟ್ಟರೆ ನಾನೇ ಸೀನಿಯರ್ :ಮುನಿಯಪ್ಪ

Views: 35
ಕೋಲಾರ, ಕಾಂಗ್ರೆಸ್ನಲ್ಲಿ ದಲಿತ ಮುಖ್ಯಮಂತ್ರಿ ಎಂಬ ಚರ್ಚೆಯಾಗುವುದಾದರೆ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಹೊರತುಪಡಿಸಿದರೆ ತಾವೇ ಹಿರಿಯರೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಪ್ರತಿಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಪರಮೇಶ್ವರ್ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿ ಕಾಣಿಸಿಕೊಳ್ಳುವುದಕ್ಕೆ ತೀಕ್ಷಣವಾಗಿ ಪ್ರತಿಕ್ರಿಯಿಸಿದರು.ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಿಂದಲೂ ದಲಿತ ಮುಖ್ಯಮಂತ್ರಿಯ ವಿಚಾರ ಚರ್ಚೆಯಾಗುತ್ತಲೇ ಇದೆ. ಖರ್ಗೆ ಅತ್ಯಂತ ಹಿರಿಯ ನಾಯಕರು, ಅವರನ್ನೇ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಮೇಶ್ವರ್ ಪ್ರತ್ಯೇಕ ಸಭೆ ನಡೆಸುತ್ತಿರುವ ಬಗ್ಗೆ ಎದುರಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ನ ದಲಿತ ನಾಯಕರಲ್ಲಿ ಖರ್ಗೆ ಅವರನ್ನು ಬಿಟ್ಟರೆ, ಹಿರಿಯ ನಾಯಕರು ಯಾರು? ತಾವೇ ಅಂದಮೇಲೆ ಬೇರೆ ರೀತಿಯ ಚರ್ಚೆ ಇನ್ನೆಲ್ಲಿದೆ ಎಂಬ ಅರ್ಥದಲ್ಲಿ ಪ್ರತಿಕ್ರಿಯಿಸಿದರು.






