ದಂಪತಿ ದುರಂತ ಅಂತ್ಯಕ್ಕೆ ಟ್ವಿಸ್ಟ್.. ಹಣಕ್ಕಾಗಿ ದೊಡ್ಡಪ್ಪ, ದೊಡ್ಡಮ್ಮನಿಗೆ ಅನಸ್ತೇಶಿಯಾ ನೀಡಿ ಕೊಂದ ವೈದ್ಯ!
Views: 85
ಕನ್ನಡ ಕರಾವಳಿ ಸುದ್ದಿ: ಭದ್ರಾವತಿ ನಗರದಲ್ಲಿ ಇತ್ತೀಚೆಗೆ ನಡೆದಿದ್ದ ವೃದ್ಧ ದಂಪತಿಯ ನಿಗೂಢ ಸಾವು ಪ್ರಕರಣವನ್ನು ಓಲ್ಡ್ ಟೌನ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಭದ್ರಾವತಿಯಲ್ಲಿ ವೃದ್ಧ ದಂಪತಿ ಚಂದ್ರಪ್ಪ ಮತ್ತು ಅವರ ಪತ್ನಿ ನಿಗೂಢವಾಗಿ ಮೃತಪಟ್ಟಿದ್ದರು. ಮನೆಯಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಆದರೆ, ದಂಪತಿಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ. ಇದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಮೇಲ್ನೋಟಕ್ಕೆ ಇದು ಸಹಜ ಸಾವು ಎಂಬಂತೆ ಕಂಡರೂ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.
ಭದ್ರಾವತಿಯಲ್ಲಿ ವೃದ್ಧ ದೊಡ್ಡಪ್ಪ ಹಾಗೂ ದೊಡ್ಡಮ್ಮನನ್ನು ವೈದ್ಯನೊಬ್ಬ ಹೆಚ್ಚಿನ ಅನಸ್ತೇಶಿಯಾ ನೀಡಿ ಹತ್ಯೆ ಮಾಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಡಾ.ಮಲ್ಲೇಶ್ ಎಂದು ಗುರುತಿಸಲಾಗಿದೆ. ಭದ್ರಾವತಿ ಬೂತನ ಗುಡಿ ಬಳಿಯ ಮನೆಯಲ್ಲಿ ಜಯಮ್ಮ (75) ಮತ್ತು ಚಂದ್ರಣ್ಣ (78) ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಪ್ರಕರಣದ ತನಿಖೆ ನಡೆಸಿದ ಪೊಲೀಸರು ಚಂದ್ರಪ್ಪ ಅವರ ತಮ್ಮನ ಮಗ ಆಯುರ್ವೇದಿಕ್ ವೈದ್ಯನಾಗಿದ್ದ ಮಲ್ಲೇಶ್ ನನ್ನು ಬಂಧಿಸಿದ್ದಾರೆ. ಆರೋಪಿ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ದೊಡ್ಡಪ್ಪ ಚಂದ್ರಪ್ಪನವರ ಬಳಿ 15 ಲಕ್ಷ ರೂ. ಕೇಳಿದ್ದ. ಆದರೆ ಚಂದ್ರಪ್ಪ ಅವರು ಹಣ ಕೊಡಲು ನಿರಾಕರಿಸಿದ್ದರು. ಇದೇ ಸೇಡಿಗೆ ಚಂದ್ರಪ್ಪ ಹಾಗೂ ಜಯಮ್ಮ ಅವರಿಗೆ ಚಿಕಿತ್ಸೆ ಕೊಡುವುದಾಗಿ ಹೆಚ್ಚಿನ ಡೋಸೇಜ್ ಅನಸ್ತೇಶಿಯಾ ಕೊಟ್ಟಿದ್ದ. ಇದರಿಂದ ತಕ್ಷಣ ಬಿಪಿ ಕಡಿಮೆ ಆಗಿದೆ. ಬಳಿಕ ಇಬ್ಬರನ್ನು ಬೇರೆ ಬೇರೆ ಮಲಗಿಸಿ ಚಿನ್ನಾಭರಣ ದೋಚಿದ್ದ. ಚಿನ್ನವನ್ನು ಅಡವಿಟ್ಟುಸಾಲ ತೀರಿಸಿ ಬ್ಯಾಂಕ್ ಖಾತೆಯಲ್ಲಿ 50,000 ರೂ. ಉಳಿಸಿಕೊಂಡಿದ್ದಾನೆ. 80 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.






