ಇತರೆ

ತೆಕ್ಕಟ್ಟೆ: 7 ವರ್ಷದ ಮಗನೊಂದಿಗೆ ತಾಯಿ ನಾಪತ್ತೆ 

Views: 187

ಕನ್ನಡ ಕರಾವಳಿ ಸುದ್ದಿ: ಮಗನೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಸ್ವಾತಿ (30) ಹಾಗೂ ಅವರ ಮಗ ಭವಿಷ್ ಎನ್ (7) ನಾಪತ್ತೆಯಾದವರು.ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ವಾತಿ ತೆಕ್ಕಟ್ಟೆ ಕೊಮೆಯಲ್ಲಿರುವ ತನ್ನ ಅಜ್ಜಿ ಮನೆಗೆ ಹೋಗುವುದಾಗಿ ತಿಳಿಸಿ, ಎ.5ರಂದು ತನ್ನ 7 ವರ್ಷ ಮಗ ಭವಿಷ್ ಜೊತೆಗೆ ಮನೆಯಿಂದ ಹೋಗಿದ್ದಾರೆ. ಆದರೆ ಇದುವರೆಗೂ ಅಜ್ಜಿಯ ಮನೆಗೂ ಹೋಗದೇ ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ.

ಸ್ವಾತಿ 5 ಅಡಿ ಎತ್ತರ, ಸಾಧರಾಣ ಶರೀರ, ಎಣ್ಣೆಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.

ಭವಿಷ್ ಎನ್ (7) 2.5 ಅಡಿ ಎತ್ತರ, ಸಾಧಾರಣ ಶರೀರ, ಎಣ್ಣೆಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯ ಉಪನಿರೀಕ್ಷಕರು ಮೊ.ನಂ: 9480805468, ಕುಂದಾಪುರ ವೃತ್ತ ಪೊಲೀಸ್ ನಿರೀಕ್ಷಕರು ಮೊ.ನಂ: 9480805433 ಅಥವಾ ಉಡುಪಿ ಕಂಟ್ರೋಲ್‌ ರೂಂ ದೂ.ಸಂಖ್ಯೆ: 0820-2526444ನ್ನು ಸಂಪರ್ಕಿಸಬಹುದು ಎಂದು ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯ ಉಪನಿರೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

Related Articles

Back to top button