ಪಡುಕರೆ ಗೆಸ್ಟ್ ಹೌಸ್‌ನಲ್ಲಿ ತಂಗಿದ್ದ ಮಹಿಳೆ ಸಾವು
Views: 0
ಕನ್ನಡ ಕರಾವಳಿ ಸುದ್ದಿ: ಮಲ್ಪೆ ಪಡುಕರೆ ಬೀಚ್‌ಗೆ ಬಂದು ಗೆಸ್ಟ್ ಹೌಸ್‌ನಲ್ಲಿ ಉಳಿದುಕೊಂಡಿದ್ದ ಬೆಂಗಳೂರಿನ ನಿವಾಸಿ ಎಲ್. ಜಾಕ್ಸನ್ ಅವರ ಪತ್ನಿ ಲೆನ್ಸಿ ಮೇರಿ (36) ಅವರು ಮಲಗಿದ್ದಲ್ಲೇ ನಿಧನ ಹೊಂದಿದ ಘಟನೆ ಫೆ. 28ರಂದು ನಡೆದಿದೆ.
ಅವರು ಫಿನ್‌ಡೆಮ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಫೆ. 26 ರಂದು ಬೆಳಗ್ಗೆ 4 ಗಂಟೆಗೆ ಇತರ 9 ಮಂದಿಯೊಂದಿಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1 ಗಂಟೆಗೆ ಉಡುಪಿಗೆ ಬಂದು, ಮಲ್ಪೆ ಪಡುಕರೆಯ ಬೀಚ್ ಹೌಸ್‌ನಲ್ಲಿ ತಂಗಿದ್ದರು. ಫೆ. 27ರಂದು ಮಲ್ಪೆ ಬೀಚ್‌ನಲ್ಲಿ ತಿರುಗಾಡಿಕೊಂಡು ಮಧ್ಯಾಹ್ನ ವಾಪಸ್ ರೂಮಿಗೆ ಬಂದು ವಿಶ್ರಾಂತಿ ಪಡೆದಿದ್ದರು. ರಾತ್ರಿ ಸ್ವಿಗ್ಗಿ ಆನ್‌ಲೈನ್‌ನಲ್ಲಿ ಊಟ ತರಿಸಿಕೊಂಡು ಉಂಡು ಮಲಗಿದ್ದರು. ಬೆಳಗ್ಗಿನ ಜಾವ ಅವರನ್ನು ಎಬ್ಬಿಸಿದಾಗ ಅವರು ಏಳುವ ಸ್ಥಿತಿಯಲ್ಲಿ ಇರಲಿಲ್ಲ. ಕೂಡಲೇ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಲೆನ್ಸಿ ಮೇರಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸಾವಿಗೆ ಹೃದಯಾಘಾತ ಕಾರಣ ಇರಬಹುದೆಂದು ಶಂಕಿಸಲಾಗಿದೆ
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






